ಕುಣಿಗಲ್: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ವಿವಾಹವಾದ ಆರೋಪಿಯನ್ನು ಹುಲಿಯೂರುದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಲಿಯೂರುದುರ್ಗ ಟೌನ್ ನಿವಾಸಿ ಪವನ್ (22) ಬಂಧಿತ ಆರೋಪಿ. ಬಾಲಕಿ ಹುಲಿಯೂರುದುರ್ಗ ಪಟ್ಟಣದವಳಾಗಿದ್ದು, ಮೇ 22 ರಂದು ಪವನ್ ತಮ್ಮ ಇಬ್ಬರು ಸಹಚರ ರೊಂದಿಗೆ ಸೇರಿ ಬಾಲಕಿಯನ್ನು ಅಪಹರಿಸಿಕೊಂಡು ಹೋದ ಎಂದು ಬಾಲಕಿಯ ತಂದೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪವನ್ ಹಾಗೂ ಬಾಲಕಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆ ತಂದು ಬಾಲಕಿಯನ್ನು ವಿಚಾರಿಸಿದಾಗ, ಆರೋಪಿಯು ನನ್ನನ್ನು ಆಂಧ್ರಪ್ರದೇಶದ ಆನಂತಪುರಕ್ಕೆ ಕರೆದುಕೊಂಡು ಹೋಗಿ ಬಳಿಕ ತುಮಕೂರು ಜಿಲ್ಲೆ ಪಾವಗಡಕ್ಕೆ ಕರೆ ತಂದು ಇಲ್ಲಿನ ದೇವಸ್ಥಾನದಲ್ಲಿ ಮದುವೆಯಾಗಿ, ನನ್ನೊಂದಿಗೆ ದೇಹ ಸಂಪರ್ಕ ಮಾಡಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಅದರ ಅನ್ವಯ ಪವನ್ ವಿರುದ್ದ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.