ಅಕ್ಷರ ದೀಪ ಫೌಂಡೇಶನ್ (ರಿ) ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ- ಉತ್ತರ ಕನ್ನಡ, ನಯನ ಪೌಂಡೇಶನ್ ಶಿರಸಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕವಿ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುತ್ತಿದ್ದು, ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಈಗಾಗಲೇ ರಾಜ್ಯದ್ಯಾಂತ ಗುರುತಿಸಿಕೊಂಡಿರುವ ಹರೀಶ್ ಪುತ್ತೂರು ರವರಿಗೆ “ಕರುನಾಡ ಕೇಸರಿ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ.
ಶ್ರೀಯುತರು ಸುಳ್ಯ ತಾಲೂಕಿನ ಕೊಡಿಯಾಲ ಎಚ್ ಆರ್ ಬಾಬು ಮತ್ತು ಕಮಲ ದಂಪತಿಯ ಪುತ್ರರಾಗಿರುವ ಇವರು ಸುದ್ದಿ ವಾಹಿನಿಯೊಂದರಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.