dtvkannada

ಮೂಡಡ್ಕ: ಇಲ್ಲಿನ ಅಲ್ ಮುನವ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಚುನಾವಣೆಯು ದಿನಾಂಕ 11/06/2022 ಶನಿವಾರದಂದು ಪ್ರಾಯೋಗಿಕವಾಗಿ ಮತದಾನದ ಎಲ್ಲಾ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡು ನಡೆಸಲಾಯಿತು.

ಮಾದರಿ ಮತ ಪತ್ರಗಳು ಹಾಗೂ ಚುನಾವಣಾ ಪತ್ರಗಳನ್ನು ಬಳಸಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಸಾರ್ವಜನಿಕ ಚುನಾವಣಾ ಪ್ರಕ್ರಿಯೆಯ ಅರಿವನ್ನು ಪಡೆಯುವುದರೊಂದಿಗೆ ಶಾಲಾ ಸಂಸತ್ತಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಖುಷಿಪಟ್ಟರು.

ಅತ್ಯಂತ ಹೆಚ್ಚು ಬಹುಮತವನ್ನು ಪಡೆದ 10ನೇ ತರಗತಿಯ ಮುಹಮ್ಮದ್ ತೌಸೀರ್ ಶಾಲಾ ನಾಯಕನಾಗಿ ಆಯ್ಕೆಯಾದನು. ಉಪನಾಯಕನಾಗಿ 9ನೇ ತರಗತಿಯ ಮುಹಮ್ಮದ್ ಅನಸ್ ಇಲ್ಯಾಸ್ ಆಯ್ಕೆಯಾದನು. ನಾಯಕ ಹಾಗೂ ಉಪನಾಯಕನಾಗಿ ಆಯ್ಕೆ ಯಾದ ವಿದ್ಯಾರ್ಥಿಗಳಿಗೆ ಮುಖ್ಯ ಗುರುಗಳಾದ ಶ್ರೀ ಸಮದ್ ಬಿ.ಎ ಹಾಗೂ ಶಾಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.

ಶೀಘ್ರದಲ್ಲೇ ಶಾಲಾ ನಾಯಕನ ನೇತೃತ್ವದಲ್ಲಿ ಮಂತ್ರಿಮಂಡಲ ರಚನೆಯಾಗಲಿದ್ದು, ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ.

By dtv

Leave a Reply

Your email address will not be published. Required fields are marked *

error: Content is protected !!