ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ದಾರುಣ ಘಟನೆ ಪುತ್ತೂರಿನ ನೆಹರುನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತ ಸವಾರನನ್ನು ಆರ್ಯಾಪು ತಾಲೂಕಿನ ದೇವಸ್ಯ ನಿವಾಸಿ ರವೀಂದ್ರ(60) ಎಂದು ತಿಳಿದಿ ಬಂದಿದೆ.
ಮೃತರು ಪುತ್ತೂರಿನ ಮಹಾಮಾಯಿ ದೇವಸ್ಥಾನದ ಬಳಿ ಕೀ ಮೇಕರ್ ಮತ್ತು ಗ್ಯಾಸ್ ಸ್ಟವ್ ರಿಪೇರಿ ಅಂಗಡಿ ಮಾಲೀಕರಾಗಿದ್ದರು. ಕಲ್ಲಿಮಾರ್ ರವಿ ಅಣ್ಣ ಎಂದೇ ಎಲ್ಲರಿಗೂ ಚಿರಪರಿಚಿತರಾಗಿದ್ದರು. ನಿನ್ನೆ ರಾತ್ರಿ ನೆಹರು ನಗರದಿಂದ ಪುತ್ತೂರು ಕಡೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ವಿರುದ್ಧ ದಿಕ್ಕಿನಿಂದ ಬಂದ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ದುರ್ಘಟನೆಯಲ್ಲಿ ರವೀಂದ್ರ ರವರು ಗಂಭೀರ ಗಾಯಗೊಂಡು, ಮೃತಪಟ್ಟಿರುವುದಾಗಿ ವರದಿಯಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.