ಪುತ್ತೂರು: ಬೆಳ್ಳಾರೆಯ ತಂಬಿನಮಕ್ಕಿ ನಿವಾಸಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಇಂದು ಮುಂಜಾನೆ ತಂಬಿನಮಕ್ಕಿ ಮನೆಯಿಂದ ಕಳಂಜ ಮಸೀದಿಗೆ ಹೋಗಿದ್ದು ಅಲ್ಲಿ ಬೆಳಿಗ್ಗೆ 7.30 ಕ್ಕೆ ಮದರಸ ನಡೆಸುತ್ತಿರುವ ತರಗತಿ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರೆಂದು ವರದಿಯಾಗಿದೆ.
ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮಾಡಾವು ಎಂಬಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ವ್ಯಕ್ತಿ ರಶೀದ್ ಮುಸ್ಲಿಯಾರ್ (51) ಎನ್ನಲಾಗಿದೆ.
ಕಳಂಜ ಬುಖಾರಿಯ ಮದರಸ ಖತೀಬರು ಅಸೌಖ್ಯದಿಂದ ರಜೆಯಲ್ಲಿದ್ದ ಸಂದರ್ಭದಲ್ಲಿ ಮಸೀದಿ ಖತೀಬರಾಗಿ ಅವರ ಬದಲಿಗೆ ರಶೀದ್ ಮುಸ್ಲಿಯಾರ್ ಸೇವೆಯನ್ನು ಮಾಡುತ್ತಿದ್ದರು.
ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.