ಸವಣೂರು: ಲೋಕ ಪ್ರವಾದಿ ಪೈಗಂಬರರನ್ನು ಮತ್ತು ಇಸ್ಲಾಮನ್ನು ಅವಹೇಳನಕಾರಿಯಾಗಿ ನಿಂದಿಸಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕಳೆದ ಶುಕ್ರವಾರ ಜುಮಾ ನಮಾಜ್ ನ ಬಳಿಕ ಪಣೆಮಜಲು ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಲ್ ನಜಾತ್ ಮುಸ್ಲಿಂ ಯೂತ್ ಫೆಡರೇಶನ್ ನ ಅಧ್ಯಕ್ಷ ಸಮೀರ್ ಸಿರಾಜ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಜಮಾಅತ್ ನ ಖತೀಬ್ ಹಾಜಿ ಅಬ್ಬಾಸ್ ಮದನಿಯವರು ದುವಾ ನೆರವೇರಿಸಿದರು.
ಮುಖ್ಯ ಭಾಷಣಗೈದ ಗ್ರಾಮಪಂಚಾಯತ್ ಸದಸ್ಯ ಎಂ.ಎ.ರಫೀಕ್ ರವರು ಮಾತನಾಡಿ “ಜಾಗತಿಕ ಮುಸ್ಲಿಂ ಸಮುದಾಯ ತಮ್ಮ ಪ್ರಾಣಕ್ಕಿಂತಲೂ ಮಿಗಿಲಾಗಿ ಆಧರಿಸುವ ಪ್ರವಾದಿಯವರ ಬಗ್ಗೆ ಕೇವಲವಾಗಿ ಮಾತನಾಡಿ ಅವಹೇಳನಗೊಳಿಸಿ ,ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವುದು ಅಕ್ಷಮ್ಯ ಮತ್ತು ಅಸಹನೀಯವಾದುದು.ಅಂತಹವರ ವಿರುದ್ಧ ಸರಕಾರ ಕೂಡಲೇ ಕ್ರಮಕೈಗೊಂಡು, ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಮೂಸಾ ಹಾಜಿ ಬೇರಿಕೆ,ಉಪಾಧ್ಯಕ್ಷರಾದ ಇಸ್ಮಾಯಿಲ್ ಪಣೆಮಜಲು,ಕಾರ್ಯದರ್ಶಿ ಸಂಶುದ್ದೀನ್ ಹಾಜಿ ಸರ್ವೆ,ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಆರ್ತಿಕೆರೆ,ಅಲ್ ನಜಾತ್ ನ ಮಾಜಿ ಅಧ್ಯಕ್ಷ ಇರ್ಷಾದ್ ಸರ್ವೆ,ಮಾಜಿ ಕಾರ್ಯದರ್ಶಿ ಹೈದರ್ ಆಲಿ ಐವತ್ತೊಕ್ಲು ಮೊದಲಾದವರು ಉಪಸ್ಥಿತರಿದ್ದರು.
ಜಮಾಅತ್ ಸದಸ್ಯ ಯೂಸುಫ್ ಹಾಜಿ ಬೇರಿಕೆ ಸ್ವಾಗತಿಸಿ ,ಅಲ್ ನಜಾತ್ ನ ಕಾರ್ಯದರ್ಶಿ ಇಬ್ರಾಹಿಂ ಪಣೆಮಜಲು ಧನ್ಯವಾದ ಸಮರ್ಪಿಸಿದರು.