dtvkannada

ಪಿಯುಸಿ ಫಲಿತಾಂಶ ಬಂದಿದ್ದು ಎದ್ದಿನಂತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ ಆದರೆ ಇವುಗಳ ಮದ್ಯೆ ಸುಮಾರು ಎಂಟರಷ್ಟು ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಬಂದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವುದು ಅಕ್ಷರಶಃ ಬೆಚ್ಚಿ ಬೀಳಿಸಿದೆ..

ಇಂತಹ ದುಃಖ ವಾರ್ತೆ ಕೇಳಿ ಬಂದುರುವುದು ನಮ್ಮದೇ ಕರ್ನಾಟಕದಲ್ಲಿ

ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಬಂದರೂ ನಿರೀಕ್ಷಿತ ಅಂಕ ಬಂದಿಲ್ಲ ಎಂದು ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಬಸವಳ್ಳಿಯ ಸಂಧ್ಯಾ(18) ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈಕೆ ವಿಜ್ಞಾನ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಫೇಲ್ ಆದ ಕಾರಣಕ್ಕೆ ಬೀದರ್ ನ ಮದ್ದರಗಿ ಗ್ರಾಮದ ಸುಹಾಸಿನಿ(18) ಎಂಬ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಅದೇ ರೀತಿ ಮಂಡ್ಯ ಜಿಲ್ಲೆಯ ಸ್ಯಾಂತ್ರೂ ಕಾಲೇಜಿನ ವಿದ್ಯಾರ್ಥಿನಿ ಸ್ಪಂದನ(17) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕುಮಟಾದ ಹೊಲಗದ್ದೆಯ ಈಶ್ವರ ನಾಯ್ಕ್(18) ಎಂಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಗಲಕೋಟೆಯ ಬೀಳಗಿಯ ಯಡಹಳ್ಳಿ ಗ್ರಾಮದ ಪೂಜಾ ರಾಜಪ್ಪ ಚಳಗೇರಿ(18) ಎಂಬ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಫೇಲ್ ಆದಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನೊಂದಡೆ ಗದಗದ ಹರ್ತಿಯ ಪವಿತ್ರಾ ಪ್ರಭುಗೌಡ ಎಂಬ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳ್ಳಾರಿಯ ಪವನ್ ಸಾಯಿ ಎಂಬ ವಿದ್ಯಾರ್ಥಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಜಯನಗರದ ಗರಗ ಗ್ರಾಮದ ಶ್ಯಾಮರಾಜ್ ಎಂಬ ವಿದ್ಯಾರ್ಥಿ ಗಣಿತದಲ್ಲಿ ಫೇಲ್ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಫೇಸ್‌ಬುಕ್‌ ಪೋಸ್ಟ್ ಮಾಡಿರುವ ಮಾಜಿ ಸಿಎಂ, ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ, ‘ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಅಥವಾ ಫೇಲಾದೆವು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಅಂಕವೇ ಎಲ್ಲವೂ ಅಲ್ಲ. ಪಾಸು-ಫೇಲು ಸಾಮಾನ್ಯ, ಜೀವನದಲ್ಲೂ ಏಳುಬೀಳು ಇದ್ದೇ ಇರುತ್ತದೆ. ಕಡಿಮೆ ಅಂಕ ಬಂದವರು ಮುಂದಿನ ತರಗತಿಯಲ್ಲಿ ಉತ್ತಮ ಅಂಕ ಪಡೆಯಲು ಯತ್ನಿಸಬೇಕು. ಫೇಲಾದವರು ಪಾಸಾಗಲು ಶ್ರಮಿಸಬೇಕು. ಅದನ್ನು ಬಿಟ್ಟು ಅಂಕಕ್ಕಾಗಿ ಜೀವವನ್ನೇ ಅಂತ್ಯ ಮಾಡಿಕೊಳ್ಳುವುದು ಹೆತ್ತವರಿಗೆ ಮಾಡುವ ಅನ್ಯಾಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂಕದ ಮೇಲೆ ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸುವ ಪೋಷಕರು ವಿದ್ಯಾರ್ಥಿಗಳ ಜೀವದ ಬೆಲೆಯನ್ನು ಅರಿಯಬೇಕಿದೆ. ನೀವು ನಿಮ್ಮ ಮಕ್ಕಳಿಗೆ ಧೈರ್ಯ ತುಂಬಬೇಕು, ಸೂಕ್ಷ್ಮ ಮನಸ್ಸಿನ ಅವರಿಗೆ ಅಕ್ಕರೆಯಿಂದ ಆತ್ಮಸ್ಥೈರ್ಯ ಮೂಡಿಸಬೇಕು’

By dtv

Leave a Reply

Your email address will not be published. Required fields are marked *

error: Content is protected !!