dtvkannada

ಉಪ್ಪಿನಂಗಡಿ: ಕೆಳ ದಿನಗಳ ಹಿಂದೆ ಅಪ್ರಾಪ್ತೆಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್ (21) ಎಂದು ತಿಳಿದು ಬಂದಿದೆ.

ಘಟನೆ ವಿವರ:-
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದಲ್ಲಿ 13 ವರ್ಷದ ಬಾಲಕಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಯ ನೆರೆಮನೆಯ ಆರೋಪಿ ಮುನಾಸಿರ್ ಆಗಾಗ ಆಕೆಯ ಮನೆಗೆ ಬಂದು ಹೊಗುತ್ತಿದ್ದನು.

ಮೇ 30 ರಂದು ಬೆಳಿಗ್ಗೆ ಆಕೆ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬನದ ಬಳಿ ತಲುಪಿದಾಗ, ಮುನಾಸಿರ್ ಕಾರಲ್ಲಿ ಬಂದು ನಿನ್ನನ್ನು ‌ಶಾಲೆಗೆ ಬಿಡುತ್ತೇನೆ ಎಂದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೆ ಉಪ್ಪಿನಂಗಡಿಯ ಲಾಡ್ಜ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದನು.

ನಂತರ ಮತ್ತೆ ಜೂ. 7 ರಂದು ಬಾಲಕಿ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಹತ್ತಿರ ತಲುಪಿದಾಗ ಆರೋಪಿ ಮುನಾಸಿರ್ ಮತ್ತೆ ಬಂದು ಆಕೆಯನ್ನು ಬಲತ್ಕಾರವಾಗಿ ಕೈ ಹಿಡಿದು ಎಳೆದು ಕಾರಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿಯ ಲಾಡ್ಜ್ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌಜ೯ನ್ಯ ನಡೆಸಿದ್ದನು.

ತದನಂತರ ಈ ವಿಷಯವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿತ್ತು.
ಬಾಲಕಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಉಪ್ಪಿನಂಗಡಿಯಲ್ಲಿ ಠಾಣೆಯಲ್ಲಿ ಅ.ಕ್ರ 71-2022 ಕಲಂ:363,376, (2) (ಎಫ್) (ಎನ್), 506 IPC ಮತ್ತು ಕಲಂ:5 (ಎಲ್),6 ಪೋಕ್ಸೋ ಕಾಯ್ದೆಯಂತೆ ಕೇಸು ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ಮೈಸೂರಿಗೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!