dtvkannada

ಮಾಣಿ: ಆಕ್ಟೀವಾದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಅಟ್ಟಾಡಿಸಿಕೊಂಡು ಬಂದ ತಂಡ ಬರ್ಬರವಾಗಿ ಕೊಲೆಗೈದ ಘಟನೆ ಮಾಣಿಯ ಕೊಡಾಜೆ ಬಳಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಕಾಪಿಕಾಡು ದಿವಂಗತ ತ್ಯಾಂಪ ಪೂಜಾರಿ ಮಗಳಾದ ಶಕುಂತಳಾ(36) ಎಂದು ತಿಳಿದು ಬಂದಿದೆ. ಇವರು ಪುತ್ತೂರಿನ ಬಂಟರ ಭವನದ ಬಳಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ

ಆಕ್ಟಿವಾದಲ್ಲಿ ತೆರಳುತ್ತಿದ್ದ ಯುವತಿಯನ್ನು ಆಟೋದಲ್ಲಿ ಬಂದ ದುಷ್ಕರ್ಮಿಗಳ ತಂಡ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೊಲೆ ಮಾಡಿ ಆಟೋದಲ್ಲಿ ಹೋಗುತ್ತಿರುವ ವೀಡಿಯೋ ವನ್ನು ಓರ್ವ ಚಿತ್ರಿಕರಿಸಿದ್ದು ಅದರಲ್ಲಿ ಆಟೋ ರಿಕ್ಷಾದ ನಂಬರ್ ಸರಿಯಾಗಿ ಕಾಣುತ್ತಿದೆ. ಕೊಲೆ ಮಾಡಿದ ದುಷ್ಕರ್ಮಿಗಳನ್ನು ವೇಗವಾಗಿ ಬಂಧಿಸಲು ಪೊಲೀಸರಿಗೆ ಉಪಯುಕ್ತವಾಗಬಹುದಾಗಿದ್ದು ಈ ಒಂದು ಘಟನೆ ನಡೆಯಲು ನಿಖರವಾದ ಕಾರಣ ಹಾಗೂ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

ಆಟೋ ರಿಕ್ಷಾ ವೀಡಿಯೋ

ಮೃತ ಮಹಿಳೆ ಗಂಡ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತ ಶರೀರ ಮಂಗಳೂರಿನ ಆಸ್ಪತ್ರೆಯ ಶವಗಾರದಲ್ಲಿಸಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!