dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಮದರಸ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6 ನೇ ಬ್ಲಾಕ್ ಬಳಿ ಸೋಮವಾರ ರಾತ್ರಿ ನಡೆದಿದೆ.

ಹಲ್ಲೆಗೊಳಗಾದ ಬಾಲಕನನ್ನು ಕಾಟಿಪಳ್ಳ ನಿವಾಸಿ ಉಮ್ಮರ್ ಎಂಬವರ ಪುತ್ರ ಶಯಾನ್(12) ಎಂದು ಗುರುತಿಸಲಾಗಿದೆ.

'; } else { echo "Sorry! You are Blocked from seeing the Ads"; } ?>

ಬಾಲಕ ಶಯಾನ್ 6ನೇ ತರಗತಿ ಮದರಸ ಕಲಿಯುತ್ತಿದ್ದು, ಮದರಸ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಾಲಕನನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ವಿದ್ಯಾರ್ಥಿಯ ಸಮವಸ್ತ್ರ ಹರಿದ ಕಾರಣ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿ ಓಡಿಹೋಗಿದ್ದಾನೆ.

ಈ ಸಂಬಂಧ ಬಾಲಕ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!