dtvkannada

ಸುಳ್ಯ/ ಗೂನಡ್ಕ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ- ಸಂಪಾಜೆ ಗಡಿ ಭಾಗದಲ್ಲಿ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸುವ ಮೂಲಕ ಒಂದೇ ವಾರದಲ್ಲಿ ಐದನೇ ಭಾರಿಗೆ ಭೂ ಕಂಪನದ ಅನುಭವ ಜನತೆಗೆ ಆಗಿದೆ.

ನಿನ್ನೆ ಮಧ್ಯರಾತ್ರಿ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಎಚ್ಚರಗೊಂಡಿದ್ದರು. ರಾತ್ರಿ 1.15 ರ ವೇಳೆ ಹಾಗೂ ಇಂದು ಬೆಳಗ್ಗೆ 10:50 ರ ಆಸುಪಾಸು ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿದ್ದಾರೆ.

ಸಂಪಾಜೆ, ಗುತ್ತಿಗಾರು, ಉಬರಡ್ಕ, ಗೂನಡ್ಕ ಹಾಗು ಸಮೀಪದ ಪ್ರದೇಶ, ಸುಳ್ಯ ನಗರ, ಎಲಿಮಲೆ, ದರ್ಖಾಸು ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂ ಕಂಪನದ ಅನುಭವವಾಗಿದೆ.

ವಾರದಲ್ಲಿ ಐದನೇ ಬಾರಿ ಭೂ ಕಂಪನ ಉಂಟಾಗಿದ್ದು ಜನರ ಆತಂಕ ಹೆಚ್ಚಿದೆ. ಜೂ.25 ರಂದು ಬೆಳಿಗ್ಗೆ 9.10 ಕ್ಕೆ 2.3 ತೀವ್ರತೆಯ ಭೂ ಕಂಪನ ಆಗಿತ್ತು. ಜೂ.28 ರಂದು ಎರಡು ಬಾರಿ ಭೂಮಿ ನಲುಗಿತ್ತು. ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 3 ತೀವ್ರತೆಯ ಹಾಗು ಸಂಜೆ 1.8 ತೀವ್ರತೆಯ ಕಂಪನ ಉಂಟಾಗಿತ್ತು. ನಿನ್ನೆ ತಡರಾತ್ರಿ ಕಂಪನದ ಅನುಭವವಾಗಿದ್ದು, ಇಂದು ಬೆಳಗ್ಗೆ ಮತ್ತೆ ಲಘು ಭೂಕಂಪನವಾಗಿದೆ ಎಂದು ವರದಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!