';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪಿರಿಯಾಪಟ್ಟಣ : ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಂದುವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಹಡಗನಹಳ್ಳಿ ಗ್ರಾಮದ ಸಾಧಿಕ್ ಅಹಮದ್ ರವರ ಪುತ್ರ ಮಹಮದ್ ಅದಂ ಮೃತಪಟ್ಟ ಬಾಲಕನಾಗಿದ್ದಾನೆ.
ಶನಿವಾರ ಮಧ್ಯಾಹ್ನ ಹಡಗನಹಳ್ಳಿ ಗ್ರಾಮದ ಪಂಚಾಯಿತಿ ಮುಂಭಾಗ ಆತನ ಸಹೋದರ ಶಾಲಾ ಬಸ್ ನಿಂದ ಇಳಿದಿದ್ದಾನೆ. ಆ ಸಂದರ್ಭದಲ್ಲಿ ಅಣ್ಣನನ್ನು ನೋಡುತ್ತಾ ನಿಂತಿದ್ದ ಬಾಲಕನ ಮೇಲೆ ಬಸ್ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಈ ಬಗ್ಗೆ ಮಗುವಿನ ತಂದೆ ಬೆಟ್ಟದಪುರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.