dtvkannada

'; } else { echo "Sorry! You are Blocked from seeing the Ads"; } ?>

ಸೌದಿ ಅರೇಬಿಯ: ಕೊಲ್ಲಿ ರಾಷ್ಟ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯ ಫ್ರೆಟರ್ನಿಟಿ ಫೋರಂ ( ಐ.ಎಫ್.ಎಫ್) ಪ್ರತೀ ವರ್ಷದಂತೆ ಈ ವರ್ಷವೂ ಹಜ್ಜಾಜಿಗಳ ಸೇವೆಯಲ್ಲಿ ಸಕ್ರಿಯವಾಗಿದೆ.

2022 ರ ಹಜ್ಜ್ ಗೆ ಈಗಾಗಲೇ ಭಾರತದಿಂದ ಎಪ್ಪತ್ತು ಸಾವಿರದಷ್ಟು ಹಜ್ಜಾಜಿಗಳು ಮಕ್ಕಾ ಪ್ರವೇಶಿಸಿದ್ದಾರೆ. ಇಂಡಿಯನ್ ಫ್ರೆಟರ್ನಿಟಿ ಫೋರಮ್(IFF) ಕಳೆದ ಇಪ್ಪತು ವರ್ಷದಿಂದ ನಿರಂತರವಾಗಿ ಮದೀನಾ,ಮಕ್ಕಾ,ಅಝೀಝಿಯಾ,ಮಿನಾ ಹಾಗೂ ಅರಫಾ ಪ್ರದೇಶಗಳಲ್ಲಿ ಹಾಜಿಗಳ ಸೇವೆ ಸಲ್ಲಿಸುತ್ತಾ ಬಂದಿದೆ.

'; } else { echo "Sorry! You are Blocked from seeing the Ads"; } ?>

ಈ ಬಾರಿ ಅಝೀಝಿಯಾದ ಹಜ್ಜಾಜಿಗಳ ವಾಸ ಸ್ಥಳದಿಂದ ಪವಿತ್ರ ಹರಮ್ ಗೆ ಜುಮಾ ನಮಾಝ್ ಗೆ ಬರುವಂತಹ ಹಜ್ಜಾಜ್ ಗಳಿಗೆ ಬಸ್ ಪೋಯಿಂಟ್ ನಲ್ಲಿ ನಿಂತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರ ವಾಸಸ್ಥಳಕ್ಕೆ ತಲುಪಿಸುಂತಹ ವ್ಯವಸ್ಥೆಗಳನ್ನು ಮಾಡುತ್ತಿದೆ.ಅದೇ ರೀತಿ ಹರಂ ನಿಂದ ಅಶಕ್ತ ಹಜ್ಜಾಜಿಗಳನ್ನು ವೀಲ್ ಚೇರ್ ಮೂಲಕ ಅವರನ್ನು ಬಸ್ಸಿನ ತನಕ ತಲುಪಿಸುವುದು ಹಾಗೂ ಸುಡು ಬಿಸಿಲಿನಲ್ಲಿ‌ ಪಾದರಕ್ಶೆಯ ವ್ಯವಸ್ಥೆ,ಅದೇ ರೀತಿ ನೀರಿನ ವ್ಯವಸ್ಥೆಯನ್ನು ಮಾಡುತ್ತಾ ಮಾನವೀಯ ಸೇವೆಯಲ್ಲಿ ನಿರತರಾಗಿದ್ದಾರೆ.

ಅಲ್ಲದೇ ಅಝೀಝಿಯಾದಲ್ಲಿ ಕೆಲವು ಹಾಜಿಗಳಿಗೆ ಅಡುಗೆ ಮಾಡಲು ಆನಾನುಕೂಲವಾದ ಕಾರಣ ರಾತ್ರಿಯ ಫಲಹಾರದ ವ್ಯವಸ್ಥೆ ಪ್ರಾಯೋಜಕರ ಮೂಲಕ ಇಂಡಿಯ ಫ್ರೆಟರ್ನಿಟಿ ಫೋರಮ್(IFF) ದಿನಂಪ್ರತಿ ಮಾಡುತ್ತಿದೆ.ಅದಲ್ಲದೇ ಎಲ್ಲಾ ಹಜ್ಜಾಜಿಗಳ ವಿಶ್ರಾಂತಿ ಕೋಣೆ ಗೆ ಭೇಟಿ ನೀಡಿ ಅವರಿಗೆ ಕೋವಿಡ್ ಮತ್ತು ಇನ್ನಿತರ ವೈರಸ್ ರೋಗ ಮತ್ತು ಸುಡುಬಿಸಿಲಿನಲ್ಲಿ ಹೊರಗೆ ಹೋಗುವಾಗ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>

ಅದಲ್ಲದೇ ವೈದ್ಯಕೀಯ ವಿಭಾಗ, ಹಾಗೂ ವಿಶೇಷವಾಗಿ ಮಹಿಳಾ ಹಾಜಿಗಳಿಗೆ ಬೇಕಾಗಿ ಸೇವೆ ಮಾಡಲು ಮಹಿಳಾ ಸ್ವಯಂ ಸೇವಕರೂ ಕೂಡ ಸೇವೆಯಲ್ಲಿ ನಿರತರಾಗಿದ್ದಾರೆ. ಮಹಿಳೆ ಹಜ್ಜಾಜಿಗಳು ಇರುವ ಕಟ್ಟಡಕ್ಕೆ ಮಹಿಳಾ ಸ್ವಯಂ ಸೇವಕಿಯರು ಭೇಟಿ ನೀಡಿ ಅವರ ಕುಂದು ಕೊರತೆಗಳಿಗೆ ಸೂಕ್ತ ಪರಿಹಾರ ವಾಗಿಯೂ, ಸಾಂತ್ವನ ವಾಗಿಯೂ ನೆರವಾಗುತ್ತಿದ್ದಾರೆ.

ದಿನದ 24 ಗಂಟೆಯೂ‌ ಹಾಜಿಗಳ‌ ಸೇವೆಗೆ ನಮ್ಮ ತಂಡ ನಿರಂತರ ಸನ್ನದ್ದವಾಗಿದೆಯೆಂದು ಈ ಬಾರಿಯ ಹಜ್ಜ್-2022 ಬೇಕಾಗಿ ಸೇವೆ ಸಲ್ಲಿಸುತ್ತಿರುವ ಇಂಡಿಯ ಫ್ರೆಟರ್ನಿಟಿ ಫೋರಂ IFF ತಂಡದ ವೈಸ್ ಕ್ಯಾಪ್ಟನ್ ಆಗಿರುವ ಶಾಕಿರ್ ಹಕ್ ನೆಲ್ಯಾಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!