dtvkannada

ಮಂಗಳೂರು: ಕುದ್ರೋಳಿ ಹ್ಯೂಮನಿಟೆರಿಯೆನ್ ರಿಲೀಫ್ ಸೊಸೈಟಿ ಮತ್ತು ಜಮಾತ್ -ಇ -ಇಸ್ಲಾಮಿ ಹಿಂದ್ ಕುದ್ರೋಳಿ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಇದರ ಆಶ್ರಯದಲ್ಲಿ ಕೆ. ಎಂ. ಸಿ.ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ
ಸಹಭಾಗಿತ್ವದಲ್ಲಿ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ 142 ನೇ ಸೌಹಾರ್ದ ಸಾರ್ವಜನಿಕ ರಕ್ತದಾನ ಶಿಬಿರವು ಫಾತಿಮಾ ಇಸ್ಲಾಮಿಕ್ ಸೆಂಟರ್ ಜಾಮೀಯ ಮಸ್ಜಿದ್ ಮಂಗಳೂರು ಕುದ್ರೋಳಿಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬ್ಲಡ್ ಹೆಲ್ಪ್ ‌ಕೇರ್ ಕರ್ನಾಟಕ(ರಿ) ಇದರ ಅದ್ಯಕ್ಷರಾದ ನಝೀರ್ ಹುಸೇನ್ ವಹಿಸಿದ್ದರು. ನಂತರ ಮಾತನಾಡಿದ ಅವರು, ಭೂಮಿಯಲ್ಲಿ ಇರುವಷ್ಟು ಕಾಲ ಬದುಕಿನುದ್ದಕ್ಕೂ ನಮ್ಮ ಮನಸ್ಸು ಸಮಾಜ ಸೇವೆಯ ತುಡಿತ ಇರುವ ಚಿಂತನೆ ಇರಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಗತ್ತಿನಲ್ಲಿ ಪ್ರತಿಯೊಂದು ವಸ್ತುಗಳನ್ನು ಕೃತಕವಾಗಿ ನಿರ್ಮಿಸಲು ಸಾಧ್ಯವಿದೆ ಆದರೆ ಜೀವ ಇರುವ ಜೀವಿಗಳಿಗೆ ಅವಶ್ಯಕವಾಗಿ ಬೇಕಾದ ರಕ್ತವನ್ನು ಯಾವ ಕಾರಣಕ್ಕೂ ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ,ರಕ್ತಕ್ಕೆ ರಕ್ತವೇ ಪರ್ಯಾಯ ದಾನಿಗಳು ರಕ್ತದಾನ ಮಾಡುವ ಮೂಲಕ ಜೀವದಾನ ಮಾಡಿರಿ, ಪುಣ್ಯ ಗಳಿಸಿರಿ ಎಂದು ಶಾಹ್ ಮೀರ್ ಮಸ್ಜಿದ್ ಕುದ್ರೋಳಿ ಖತೀಬ್ ರಿಯಾಝ್ ಉಲ್ ಹಕ್ ರಶಾದಿ ಹೇಳಿದರು.

ವೇದಿಕೆಯಲ್ಲಿ ಜಾಮಿಯ ಮಸ್ಜಿದ್ ಕುದ್ರೋಳಿ ಖತೀಬ್ ಮೌಲಾನ ಝುಭೈರ್ ಸಾಬ್,ಶರೀಫ್ ಸೂರಲ್ಪಾಡಿ, ಕೆ.ಎಂ.ಸಿ.ಬ್ಲಡ್ ಬ್ಯಾಂಕ್ ಮುಖ್ಯಸ್ಥ ಪ್ರಜ್ವಲ್, ಜಮಾಅತೆ ಇಸ್ಲಾಂ ಹಿಂದ್ ಕುದ್ರೋಳಿ
ವರ್ತುಲ ಸಂಚಾಲಕರಾದ ಮಕ್ಬೂಲ್‌ಅಹ್ಮದ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ, ಕೋಶಾಧಿಕಾರಿ ಸತ್ತಾರ್ ಪುತ್ತೂರು, ಕಾರ್ಯದರ್ಶಿ ಬಶೀರ್ ಮಂಗಳೂರು, ಶಿಬಿರದ ಉಸ್ತುವಾರಿ ಖಾದರ್ ಮುಂಚೂರ್, ಕಾರ್ಯ ನಿರ್ವಾಹಕ ಶಿಯಾನ್ ಪಡುಬಿದ್ರೆ, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಪ್ರೋತ್ಸಾಹಕರಾದ ಉಸ್ಮಾನ್ ಕಲಾಯಿ ಹಾಗೂ ಸಂಸ್ಥೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು.

ಮುಝೈರ್ ಅಹ್ಮದ್ ಕಿರಾಅತ್ ಪಠಿಸಿದರು.
ನಿಹಾಲ್ ಮಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!