';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಸುಳ್ಯದ ಗಾಂಧಿ ನಗರದಲ್ಲಿ ಮದ್ರಸ ಅಧ್ಯಾಪಕರಾಗಿದ್ದ ಕುಂಬ್ರ ಸಮೀಪದ ಶೇಖಮಲೆ ನಿವಾಸಿ ಅಬ್ದುಲ್ ಹಮೀದ್(53) ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಕುಂಬ್ರ ಸಮೀಪದ ಶೇಖಮಲೆ ಜಮಾಅತ್ ಗೆ ಒಳಪಟ್ಟ ಹಾಗೂ SYS ಕುಂಬ್ರ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಹಮೀದ್ ಮುಸ್ಲಿಯಾರ್ ರವರು, ಸುಳ್ಯ ಗಾಂಧಿ ನಗರದ ಮದ್ರಸ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರು ನಿನ್ನೆ ರಾತ್ರಿ ತನ್ನ ಮನೆಯಲ್ಲಿದ್ದು, ಈದ್ ಹಬ್ಬದ ಪ್ರಯುಕ್ತ ಉತ್ಸಾಹಕರಾಗಿ ತಯಾರಿಯಾಗಿದ್ದರು. ಆದರೆ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಇವರು ಪತ್ನಿ, ಇಬ್ಬರು ಗಂಡು ಹಾಗೂ ಒರಓವ ಹೆಣ್ಣು ಮಗಳನ್ನು ಅಗಲಿದ್ದಾರೆ. ಇವರ ಮಗಳಿಗೆ ತಿಂಗಳ ಹಿಂದೆಯಷ್ಟೇ ವಿವಾಹ ನಡೆದಿದ್ದು, ಆ ಸಂತೋಷ ಮಾಸುವ ಮುನ್ನವೇ ಮನೆಯಲ್ಲಿ ದುಃಖದ ಚಾಯೆ ಮಡುಗಟ್ಟಿದೆ.