';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ತೆಕ್ಕಾರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕೇಂದ್ರ ಜುಮಾ ಮಸ್ಜಿದ್ ತೆಕ್ಕಾರು ಇಲ್ಲಿ ಪವಿತ್ರ ಈದ್ ಸಂದೇಶವನ್ನು ನೀಡಿದ ಮಸೀದಿ ಖತೀಬ್ ಉಸ್ತಾದ್ ಮಜೀದ್ ಕಾಮಿಲ್ ಸಖಾಫಿ ತ್ಯಾಗ ಬಲಿದಾನದ ಸ್ಮರಣೀಯ ಸಂದೇಶವನ್ನು ಸಾರುವ ಈ ಪವಿತ್ರವಾದ ಹಬ್ಬ ಎಲ್ಲರೆಡೆಯಲ್ಲಿ ಸಂತೋಷವನ್ನು ಸೃಷ್ಟಿಸಲಿ ಮತ್ತು ಇಬ್ರಾಹಿಂ ನೆಬಿ ಹಾಗು ಇಸ್ಮಾಯಿಲ್ ನೆಬಿಯರ ತ್ಯಾಗದ ಬಲಿದಾನವನ್ನು ಇಲ್ಲಿ ನಾವು ಸ್ಮರಿಸಬೇಕಿದೆ ಎಂದು ಅವರು ಸಂದೇಶ ಬಾಷಣ ಮಾಡಿದರು.
ಇದೇ ವೇಳೆ ವಿದೇಶ ಯಾತ್ರೆಗೈಯುತ್ತಿರುವ ತೆಕ್ಕಾರಿನಲ್ಲಿ ದೀರ್ಘ ಕಾಲ ಸೇವೆಗೈದ ಉಸ್ತಾದ್ ಉಸ್ಮಾನ್ ಮುಸ್ಲಿಯಾರ್ ರವರನ್ನು ಬೀಳ್ಕೊಡಲಾಯಿತು.
ಮುಸಲ್ಮಾನ ಬಾಂಧವರು ಪರಸ್ಪರ ಆಲಿಂಗನ ಮಾಡಿ ಪವಿತ್ರ ಈದ್ ಸಂಭ್ರಮವನ್ನು ವಿನಿಮಯ ಮಾಡಿಕೊಂಡರು.