ಬೆಳ್ಳಾರೆ: ಸಂಘಪರಿವಾರದವರಿಂದ ಅಮಾನುಷ ರೀತಿಯಲ್ಲಿ ಹಲ್ಲೆಗೊಳಗಾಗಿ ಕೊಲೆಗೈಯಲ್ಪಟ್ಟ ಘಟನೆ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ನಡೆದಿದ್ದು ಈ ಕ್ರತ್ಯವನ್ನು ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಖಂಡಿಸುತ್ತದೆ.
ಶಾಂತವಾಗಿರುವ ಪ್ರದೇಶದಲ್ಲಿ ಗಲಭೆಯೆಬ್ಬಿಸುವ ಉದ್ದೇಶದಿಂದ ನಡೆಸುವ ಇಂತಹ ಅಮಾನುಷ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಎಸ್ಸೆಸ್ಸಫ್ ದ.ಕ ಜಿಲ್ಲಾ ಈಸ್ಟ್ ಸಮಿತಿ ಆಗ್ರಹಿಸುತ್ತಿದೆ.
ಮೃತ ಯುವಕನ ಕುಟುಂಬಕ್ಕೆ ಪರಿಹಾರವಾಗಿ ಗರಿಷ್ಠ ಮೊತ್ತವನ್ನು ನೀಡಬೇಕೆಂದೂ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಕಾನೂನು ಪಾಲಕರು ಜಾಗೃತೆ ವಹಿಸಬೇಕಾಗಿ ಈ ಮೂಲಕ ಆಗ್ರಹಿಸುತ್ತಿದೆ.