ಕೇರಳ:ತಿರುವನಂತಪುರಂ ಸಿರಾಜ್ ಪತ್ರಿಕೆಯ ಮುಖ್ಯಸ್ಥರಾಗಿದ್ದ ಬಿ.ಎಂ ಬಶೀರ್ ಎಂಬವರನ್ನು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಹತ್ಯೆಗೈಯಲ್ಪಟ್ಟ ಕೇಸಿನ ಮುಖ್ಯ ಆರೋಪಿ ಶ್ರೀ ರಾಮನ್ ವೆಂಕಟ್ರಮಣರವರನ್ನು ಆಲಪ್ಪುಝ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿದ್ದನ್ನು ವಿರೋಧಿಸಿ ಕೇರಳ ಮುಸ್ಲಿಂ ಜಮಾಅತ್ ಮತ್ತು ಎಸ್.ಎಸ್.ಎಫ್ ನ ಭಾರೀ ಪ್ರತಿಭಟನೆ ನಂತರ ಆತನನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ಕೆಳಗಿಳಿಸಿ ಘಟನೆ ಸೋಮವಾರ ಸಂಭವಿಸಿದೆ.
ಕೇರಳದಲ್ಲಿ ವೆಂಕಟರಮಣರವರನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ಕೆಳಗಿಳಿಸಬೇಕೆಂದು ಕೇರಳ ಮುಸ್ಲಿಂ ಜಮಾಅತ್ ತಮ್ಮ ಅದೀನ ಸಂಘಟನೆಗಳಾದ SSF ಮತ್ತು SYS ಸಹಬಾಗಿತ್ವದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಬಾರೀ ಜನಸ್ತೋಮದೊಂದಿಗೆ ಜುಲೈ 30 ರಂದು ಬೃಹತ್ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಬಿಸಿ ಏರುತ್ತಿದ್ದಂತೆ ಕೇರಳ ಸರ್ಕಾರ ಎರಡೇ ದಿನದಲ್ಲಿ ಆಲಪ್ಪುಝ ಜಿಲ್ಲಾಧಿಕಾರಿ ಹುದ್ದೆಯಿಂದ ವೆಂಕಟರಮಣ ರವರನ್ನು ಕೆಳಗಿಳಿಸಿ ಆದೇಶ ಹೊರಡಿಸಿದ್ದಾರೆ.ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಶ್ರೀ ಕೃಷ್ಣ ತೇಜ ರವರನ್ನು ಆಯ್ಕೆ ಮಾಡಲಾಗಿದೆ.
ತದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇರಳ ಮುಸ್ಲಿಂ ಜಮಾಅತ್ ನೇತಾರ ಸೆಯ್ಯದ್ ಕಡಲುಂಡಿ ತಂಙಳ್ ಕೇರಳ ಸರ್ಕಾರದ ಈ ನಿಲುವನ್ನು ನಾವು ಸ್ವಾಗತಿಸುತ್ತೇವೆ ಅನ್ಯಾಯದ ವಿರುದ್ಧ ಈ ರೀತಿಯ ಹೋರಾಟಗಳು ನಿರಂತರವಾಗಿರುತ್ತದೆ ಎಂದು ಅವರು ಹೇಳಿದರು.
ಅದೇ ರೀತಿ ಮೂರನೇ ದಿನಾಂಕದಂದು ಪ್ರತಿ ಯುನಿಟ್ ಗಳಲ್ಲಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯನ್ನು ಈ ಮೂಲಕ ಕೈ ಬಿಡಲಾಗಿದೆ ಎಂದು ಅವರು ತಿಳಿಸಿದರು.