';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಮಾನ್ಯ ಸಿ.ಟಿ ರವಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೇ ಪೇಚಿಗೆ ಸಿಲುಕಿದ ಘಟನೆ ಸೋಮವಾರ ನಡೆದಿದೆ.
ಮಾಧ್ಯಮದವರು ಸಿ,ಟಿ ರವರ ಬಳಿ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ತೆರಳಿ ಸಾಂತ್ವನ ಹೇಳುತ್ತಾರೆ ಆದರೆ ಪಕ್ಕದಲ್ಲಿದ್ದ ಮಸೂದ್ ರವರ ಮನೆಗೆ ತೆರಳದೇ ವಾಪಾಸ್ ಆಗಿದ್ದಾರೆ ಸಾಂತ್ವನ ಮತ್ತು ಪರಿಹಾರ ಎರಡು ಕುಟುಂಬಗಳಿಗೂ ನೀಡಬೇಕಲ್ಲವೇ ಅವರು ರಾಜ್ಯದ ಮುಖ್ಯಮಂತ್ರಿಗಳು ಎಂದು ಕೇಳಿದಾಗ ಸಿ.ಟಿ ರವಿ ಅವರು ಕೆಲವು ನಿಮಿಷಗಳು ಉತ್ತರಿಸಲಾಗದೇ ಪೇಚಿಗೆ ಸಿಲುಕಿದರು.
ತದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿ.ಟಿ ರವಿ ರವರು ಸಂವಿಧಾನ ಬದ್ಧವಾಗಿ ಎಲ್ಲರೂ ಒಂದೇ ಎಲ್ಲರನ್ನು ಸಮಾನವಾಗಿ ನೋಡ ಬೇಕೆಂದು ಸಂವಿಧಾನ ಕಲ್ಪಿಸುತ್ತದೆ. ಪಕ್ಷದ ನಿಟ್ಟಿನಲ್ಲಿ ನೋಡುವುದಾದರೆ ಪ್ರವೀಣ್ ನಮ್ಮ ಪಕ್ಷದ ಕಾರ್ಯಕರ್ತ ಇನ್ನೇನಿದ್ದರೂ ಸಂಬಂಧಪಟ್ಟವರಲ್ಲಿ ಕೇಳಿ ಎಂದು ಹೇಳಿ ಸಿ.ಟಿ ರವಿ ಅವರು ಅಲ್ಲಿಂದ ಕೈ ತೊಳೆದುಕೊಂಡು ಬಿಟ್ಟಿದ್ದಾರೆ.