ಉಪ್ಪಿನಂಗಡಿ: ಗಲ್ಫ್ ಫ್ರೆಂಡ್ಸ್ ತೆಕ್ಕಾರು ಇದರ ಜನ ಸೇವೆ ಮತ್ತು ಜಮಾಅತ್ ವ್ಯಾಪ್ತಿಯಲ್ಲಿ ನಡೆಸುವ ಕಾರ್ಯಾಚರಣೆ ಅದು ಮಹತ್ವದ್ದು ಅನಿವಾಸಿಗಳಾಗಿ ತಾನಾಯಿತು ತನ್ನ ಪಾಡಾಯಿತು ಎಂದರಿಯದೇ ತೆಕ್ಕಾರು ಜಮಾಅತ್ ಬಾಂಧವರು ಕಣ್ಣೀರೊರೆಸುವ ನಿಮ್ಮ ಸೇವೆ ಅಲ್ಲಾಹನ ಬಳಿ ಮಹತ್ವ ತುಂಬಿದ್ದು ಎಂದು ಕೇಂದ್ರ ಜುಮಾ ಮಸ್ಜಿದ್ ತೆಕ್ಕಾರು ಇದರ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಅಭಿಪ್ರಾಯಪಟ್ಟರು
ಅವರು ಗಲ್ಫ್ ಫ್ರೆಂಡ್ಸ್ ತೆಕ್ಕಾರು ಇದರ ವಾರ್ಷಿಕ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತೆಕ್ಕಾರು ಜಮಾಅತ್ತಿನ ಅನಿವಾಸಿ ಮಿತ್ರರ ಸಂಘಟನೆ
ಗಲ್ಫ್ ಫ್ರೆಂಡ್ಸ್ ತೆಕ್ಕಾರು ಇದರ ವಾರ್ಷಿಕ ಮಹಾಸಭೆ ಶುಕ್ರವಾರ ಆನ್ ಲೈನ್ ಮುಕಾಂತರ ನಡೆಯಿತು.
ಕಾರ್ಯಕ್ರಮದಲ್ಲಿ ತೆಕ್ಕಾರು ಜಮಾಅತ್ತಿನ ಮಾಜಿ ಖತೀಬ್ ಉಸ್ತಾದ್ ಉಸ್ಮಾನ್ ಸಹದಿ ಗಲ್ಫ್ ಫ್ರೆಂಡ್ಸ್ ನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅತಾವುಲ್ಲ T.H ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಾಲಿ ಸಮಿತಿ ಅಧ್ಯಕ್ಷ ಅಶ್ರಫ್ ಲತೀಫಿ ಅಧ್ಯಕ್ಷತೆ ವಹಿಸಿದರು.
ಹಾಲಿ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ T.H ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ಇದೇ ವೇಳೆ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ಲಾ ಅಹ್ಮದ್ ಕೆಳಗಿನ ಹಿತ್ತಿಲು
ಅಧ್ಯಕ್ಷರಾಗಿ ಟಿ.ಕೆ ಕಾಸಿಂ ಮದನಿ ಕನರಾಜೆ ಪ್ರಧಾನ ಕಾರ್ಯದರ್ಶಿಯಾಗಿ ಹಬೀಬುಲ್ಲಾ T.H
ಜೊತೆ ಕಾರ್ಯದರ್ಶಿಯಾಗಿ ತ್ವಾಹಿರ್ T.H, ಕೋಶಾಧಿಕಾರಿಯಾಗಿ ಅಶ್ರಫ್ A.T ಯವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಾಕಾರಿಣಿ ಸಮಿತಿಯ ಸದಸ್ಯರನ್ನಾಗಿ ಇಲ್ಯಾಸ್ ಕನರಾಜೆ, P,M ಅಬ್ದುಲ್ ರಝಾಕ್ ಉಸ್ತಾದ್, ಅಬೂಬಕ್ಕರ್ ಸಿದ್ದೀಕ್ ದಂಬೆತ್ತಡಿ, ಅಬೂಬಕ್ಕರ್ ಸಿದ್ದಿಕ್ ಕನರಾಜೆ, ಅಶ್ರಫ್ T,H, ಇಕ್ಬಾಲ್ ಕಲ್ಲೇರಿ, ಅಬ್ದುಲ್ ರಝಾಕ್ T.H ಮತ್ತು ಅಬ್ದುಲ್ ಬಾಸಿತ್ ಕನರಾಜೆಯವರನ್ನು ಆಯ್ಕೆ ಮಾಡಲಾಯಿತು.