dtvkannada

'; } else { echo "Sorry! You are Blocked from seeing the Ads"; } ?>

ಭಟ್ಕಳ: ಮನೆಯಿಂದ ಹೊರಟು ರಾತ್ರಿ ಅಂಗಡಿಯಿಂದ ಬ್ರೆಡ್ ಖರೀದಿ ಮಾಡಿ ಮನೆಗೆ ಮರಳುತ್ತಿದ್ದ ಎಂಟು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ ಕಾರಿನಲ್ಲಿ ಕರೆದುಕೊಂಡು ಹೋದ ಘಟನೆ ಭಟ್ಕಳದ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಜಾದ್ ನಗರದ ಕೊಕ್ತಿ ಸಮೀಪ ರಾತ್ರಿ ನಡೆದಿದೆ.

ಕೊಕ್ತಿ ಆಜಾದ ನಗರ ನಿವಾಸಿ ಅಲಿ ಸಾದಾ ಇಸ್ಲಾಂ ಸಾದಾ ಅಪಹರಣವಾದ ಬಾಲಕ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಬಾಲಕನ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಶನಿವಾರ ಸಂಜೆಯಿಂದ ಬಾಲಕನ ಮನೆ ಮುಂದೆ ಅಪರಿಚಿತ ಕಾರೊಂದು ಸಂಚರಿಸುತ್ತಿದ್ದ ದೃಶ್ಯ ಹಾಗೂ ಕಾರಿನಲ್ಲಿ ಬಾಲಕನನ್ನು ಅಪಹರಣ ಮಾಡಿಕೊಂಡು ಹೋಗಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಭಟ್ಕಳ ಶಹರ ಠಾಣೆ ಸಿ.ಪಿ.ಐ ದಿವಾಕರ ಅವರ ನೇತೃತ್ವದಲ್ಲಿ ಬಾಲಕನ ರಕ್ಷಣೆಗೆ ಹಾಗೂ ಅಪಹರಣಕಾರರ ಪತ್ತೆಗೆ ಹುಡುಕಾಟ ಆರಂಭವಾಗಿದೆ.

'; } else { echo "Sorry! You are Blocked from seeing the Ads"; } ?>

ನಿನ್ನೆ ಬೆಳಿಗ್ಗೆಯವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಅಪರಹಣದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತಯೇ ಆಜಾದ್ ನಗರ ಸುತ್ತಮತ್ತ ಜನ ಜಮಾವಣೆಗೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!