ಅಭಾ (ಸೌದಿ ಅರೇಬಿಯಾ) : ಇಂಡಿಯಾ ಫ್ರೆಟರ್ನಿಟಿ ಫಾರಂ (IFF) ಕರ್ನಾಟಕ ಚಾಪ್ಟರ್,ಅಭಾ-ಸೌದಿ ಅರೇಬಿಯಾ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕರ್ನಾಟಕ ಹಾಗೂ ಉತ್ತರ ಭಾರತದ ಅನಿವಾಸಿಗರ ಸಮ್ಮಿಲನ, “ಫ್ರೀಡಂ ಫೆಸ್ಟ್ (ಜಶ್ನೇ ಆಝಾದಿ)” ಕಾರ್ಯಕ್ರಮವು ಸೆಪ್ಟೆಂಬರ್ 02 ರಂದು ಶುಕ್ರವಾರ ಅಭಾ, ಏರ್ಪೋರ್ಟ್ ರೋಡ್ ನಲ್ಲಿರುವ ಅಲ್ ಫಕಾಮ ಇಸ್ತಿರಾಹ್ ನಲ್ಲಿ ನಡೆಯಲಿದೆ.
![](http://dtvkannada.in/wp-content/uploads/2022/08/IMG-20220831-WA0019.jpg)
ಸಾಯಂಕಾಲ 5.00 ಘಂಟೆಗೆ ಸರಿಯಾಗಿ ಉದ್ಘಾಟನೆಗೊಂಡು ರಾತ್ರಿ ತನಕ ನಡೆಯುವ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್,ಡ್ರಾಯಿಂಗ್, ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳು ,ಪುರುಷರಿಗೆ ಓಪನ್ ಕ್ವಿಝ್ ಸೇರಿದಂತೆ ಹಲವು ಸ್ಪರ್ಧೆಗಳು,ಮತ್ತು ಮಹಿಳೆಯರಿಗೆ ಕ್ರಾಫ್ಟ್ ಹಾಗೂ ಸಲಾಡ್ ಸ್ಪರ್ಧೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಲಾಗಿದೆ.
![](http://dtvkannada.in/wp-content/uploads/2022/08/IMG-20220831-WA0017-642x1024.jpg)
ಸಂಜೆ 7.00 ಘಂಟೆಯ ನಂತರ ಸಭಾ ಕಾರ್ಯಕ್ರಮ ಹಾಗೂ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಅಭಾ,ಕಮೀಶ್ ಮುಶಾಯತ್,ಬೈಶ್,ಜಿಝಾನ್,ನಝ್ರಾನ್ ಪ್ರದೇಶದ ಅನಿವಾಸಿ ಭಾರತೀಯರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಗಳಾಗಬೇಕೆಂದು ಇಂಡಿಯಾ ಫ್ರೆಟರ್ನಿಟಿ ಫಾರಂ (IFF) ಇದರ ಜೀಝಾನ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಇಕ್ಬಾಲ್ ಕೂಳೂರು ರವರು ಪತ್ರಿಕಾ ಪ್ರಕಟನೆಗೆ ತಿಳಿಸಿದರು.
![](http://dtvkannada.in/wp-content/uploads/2022/08/IMG-20220831-WA0018-537x1024.jpg)