ಬಳ್ಕುಂಜೆ :ಮುಗ್ಧ ಮಗುವಿನ ಮನಸ್ಸಿನಲ್ಲಿ ಒಂದಿಂಚೂ ಕಲ್ಮಶಗಳು ಇಲ್ಲವಾದಲ್ಲಿ ರಕ್ತದಾನ ಮಾಡುವ ಪ್ರತಿಯೊಬ್ಬ ರಕ್ತ ದಾನಿಯ ಮನಸ್ಸು ಮಗುವಿನ ಮನಸ್ಸಿಗಿಂತ ಶ್ರೇಷ್ಠ ಆ ಕಾರಣಕ್ಕಾಗಿ ಮುಗ್ದರನ್ನು ವಂಚಿಸದಿರಿ ಎಂದು ಸಂತ ಪೌಲರ ದೇವಾಲಯದ ಧರ್ಮ ಗುರು ವಂದನೀಯ ಫಾದರ್ ಗಿಲ್ಬರ್ಟ್ ಡಿಸೋಜ ಹೇಳಿದರು. ಅವರು ಇಂದು ಭೂ ಸಂತ್ರಸ್ತರ ಹಿತರಕ್ಷಣಾ ಸಮಿತಿ ಬಳ್ಕುಂಜೆ ಉಳೆಪಾಡಿ ಕೊಲ್ಲೂರು ಮತ್ತುಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)
ಜಂಟಿ ಆಶ್ರಯದಲ್ಲಿ
ಹಳೆ ವಿದ್ಯಾರ್ಥಿ ಸಂಘ ಕೊಲ್ಲೂರು, ಐ. ಸಿ. ವೈ. ಎಂ. ಬಳ್ಕುಂಜೆ, ವೈ. ಸಿ. ಎಸ್. ಬಳ್ಕುಂಜೆ, ಕ್ಯಾಥೋಲಿಕ್ ಸಭಾ ಬಳ್ಕುಂಜೆ, ಮೊಹಿಯುದ್ದೀನ್ ಜುಮ್ಮಾ ಮಸೀದಿ ಕರ್ನಿರೆ, ವಿಠೋಭ ರಖುಮಾಯಿ ಭಜನಾ ಮಂದಿರ ಬಳ್ಕುಂಜೆ, ಯುವಕ ಮಂಡಲ ಉಳೆಪಾಡಿ, ರಿಕ್ಷಾ ಚಾಲಕ ಮಾಲಕರ ಸಂಘ(ರಿ)ಬಳ್ಕುಂಜೆ,
ಹಾಗೂ ಏ. ಜೆ. ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ
ಸಹಬಾಗಿತ್ವದಲ್ಲಿ
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ 148ನೇಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ರೋಯಲ್ ಐ ಕೇರ್ ರವರಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಪ್ರೇಮ್ ವಿತರಣೆ, ರಕ್ತದೊತ್ತಡ(ಬಿ. ಪಿ) ಮಧುಮೇಹ(ಶುಗರ್) ತಪಾಸಣೆ, ಪಿಸಿಯೋತಿರಪಿ ಶಿಬಿರ ಬಳ್ಕುಂಜೆ ಚರ್ಚ್ ಹಾಲ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಬಳ್ಕುಂಜೆ ಗ್ರಾಮ ಪಂಚಾಯತ್ ಅದ್ಯಕ್ಷರಾದ ಮಮತಾ ಡಿ.ಪೂಂಜಾ ಮಾತಾಡಿ ಉಳ್ಳವರು ಇಲ್ಲದವರ ಬಗ್ಗೆ ಅರಿತು ಅವರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹತ್ತಿರ ತನ್ನಿರಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಹಾಫಿಲ್ ಹನೀಫ್ ಸಹದಿ,ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್,ನಿವ್ರತ ಮುಖ್ಯ ಶಿಕ್ಷಕರಾದ ನಾಗಭೂಷಣ್ ರಾವ್,ಎ ಜೆ ಆಸ್ಪತ್ರೆ ರಕ್ತನಿಧಿ ಮುಖ್ಯಸ್ಥ ಗೋಪಾಲಕೃಷ್ಣ, I C Y M ಸಂಸ್ಥೆಯ ಅದ್ಯಕ್ಷರಾದ ಕೆರೋಲಿನ್ ಡಿಸೋಜ. Y C.S ಅದ್ಯಕ್ಷರಾದ ಸೋನಿಯ ಡಿಸೋಜ, ಕಥೋಲಿಕ್ ಸಭಾ ಅದ್ಯಕ್ಷರಾದ ಮೆಲ್ರೀಡಾ ರೊಡ್ರೀಗಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ಡಾ.ಫ್ರೀಡಾ ರೊಡ್ರಿಗಸ್, ಹಳೇ ವಿದ್ಯಾರ್ಥಿ ಸಂಘ ಕೊಲ್ಲೂರು ಇದರ ಅದ್ಯಕ್ಷರಾದ ಉಮೇಶ್ ನಾಯ್ಕ್, ವಿಠೋಭ ರಖುಮಾಯಿ ಭಜನಾ ಮಂದಿರ ಬಲ್ಕುಂಜೆ ಇದರ ಅದ್ಯಕ್ಷರಾದ ದಯಾನಂದ ಶೆಟ್ಟಿ, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಶಿಬಿರದ ಉಸ್ತುವಾರಿಗಳಾದ ಇಂತಿಯಾಝ್ ಬಜಪೆ,ಖಾದರ್ ಮಂಚೂರು, ಕೋಶಾಧಿಕಾರಿ ಸತ್ತಾರ್ ಪುತ್ತೂರು, ಜತೆ ಕಾರ್ಯದರ್ಶಿ ಬಶೀರ್ ಕ್ರಷ್ಣಾಪುರ, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ ಸಿ ರೋಡ್,ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯ ನಿರ್ವಾಹಕರಾದ ರಾಫಿಝ್ ಕ್ರಷ್ಣಾಪುರ,ಅಶ್ರಫ್ ಮಂಚಿಲ,ಶಿಹಾನ್ ಪಡುಬಿದ್ರೆ,ನೌಫಾಲ್ ಇಫ್ತಿಕಾರ್,ಆಸೀಪ್ ಬಬ್ಬುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಭೂ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯ ಅದ್ಯಕ್ಷರಾದ ಡಿಸೋಜ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಂಚಾಲಕರಾದ ಸಂಶುದ್ದೀನ್ ದೊಡ್ಡಕೆರೆ ಪ್ರಸ್ತಾವಣೆಗೈದರು.ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ದಿನಕರ ಶೆಟ್ಟಿ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು. ಭೂ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯ ಸದಸ್ಯರಾದ ವಿನ್ಸೆಂಟ್ ಸಿಕ್ವೇರ ವಂದಿಸಿದರು.