ಬೆಳಗಾವಿ: ರಾಜ್ಯ ಅರಣ್ಯ ಮತ್ತು ಆಹಾರ ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವಿಟ್ ಮೂಲಕ ಪ್ರತಿಕ್ರಯಿಸಿರುವ ಮಾಜಿ ಸಿ.ಎಂ ಸಿದ್ದರಾಮಯ್ಯ ಕತ್ತಿರವರ ಅಗಳುವಿಕೆ ಆಘಾತ ತರಿಸಿದೆ ಎಂದು ಟ್ವಿಟ್ ಮಾಡಿದ್ದಾರೆ.
ಅದೇ ರೀತಿ ಟ್ವಿಟ್ ಮೂಲಕ ಸಂತಾಪ ಸೂಚಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಕಂಡ ಉತ್ತಮ ಅಭಿವೃದ್ಧಿಯ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ.
ಕತ್ತಿ ರವರ ಆಗಳುವಿಕೆ ತುಂಬಾ ದುಃಖ ತರಿಸಿದೆ.
ಅವರ ಕುಟುಂಬಕ್ಕೆ ಅಗಳುವಿಕೆಯ ನೋವನ್ನು ಭರಿಸಲು ಶಕ್ತಿಯನ್ನು ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲೇ ಉಮೇಶ್ ಕತ್ತಿ ರವರ ಅಂತಿಮ ದರ್ಶನವನ್ನೂ ಕೂಡ ಅವರು ಪಡೆದರು.
ಮಾಜಿ ಸಿ.ಎಂ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಸಚಿವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನು ಉತ್ತರ ಕರ್ನಾಟಕದಲ್ಲಿ ನಾಯಕನ ಸಾವಿಗೆ ಪಕ್ಷದ ಕಾರ್ಯಕರ್ತರು ಕಣ್ಣೀರು ಹರಿಸುತ್ತಿದ್ದು ಬೆಳಗಾವಿಯಾದ್ಯಾಂತ ಸಚಿವ ಕತ್ತಿ ರವರ ಸಾವಿನ ಹಿನ್ನಲೆ ಶಾಲೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.