';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಹತ್ಯೆಯಲ್ಲಿ ನ್ಯಾಯ ನೀಡುವ ವಿಚಾರದಲ್ಲಿ ಸರ್ಕಾರದ ಧೋರಣೆ ಖಂಡಿಸಿ
ಮುಸ್ಲಿಂ ಐಕ್ಯ ವೇದಿಕೆ ಸುರತ್ಕಲ್ ಇದರ ವತಿಯಿಂದ ಬೃಹತ್ ಪ್ರತಿಭಟನೆ ಮಂಗಳೂರುನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪ್ರತಿಭಟನಾಕಾರರು ಬಾಗವಹಿಸಿದ್ದು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ದ.ಕ ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆಗಳಲ್ಲಿ ಎರಡು ಹತ್ಯೆಗಳ ವಿಚಾರದಲ್ಲಿ ನ್ಯಾಯ ಮರೀಚಿಕೆಯಾಗಿದ್ದು ಪ್ರವೀಣ್ ಮನೆಗೆ ಮಾತ್ರ ಮುಖ್ಯಮಂತ್ರಿಗಳು ಭೇಟಿ ನೀಡಿ ತಾರತಮ್ಯ ಎಸೆಗಿದ್ದಾರೆ ಅವರ ಇಂತಹ ನೀಚ ಕಾರ್ಯ ಸಮಾಜ ಒಪ್ಪುವಂತಹದಲ್ಲ ಎಂದು ಬಾಷಣಗಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರವೀಣ್ ಗೆ ನೀಡಿದ ಅದೇ ನ್ಯಾಯವನ್ನು ಹತ್ಯೆಯಾದ ಇಬ್ಬರಿಗೂ ನೀಡಬೇಕಂದು ಅವರು ಸರ್ಕಾರವನ್ನು ಒತ್ತಾಯಪಡಿಸಿದರು.
ಫಾಝಿಲ್ ಮತ್ತು ಮಸೂದ್ ನ ಪರ ಧ್ವನಿಯಾಗಿ ಸಾವಿರಾರು ಮಂದಿಗಳು ಘೋಷಣೆ ಕೂಗಿದರು.
ಸರ್ಕಾರದ ವಿರುದ್ಧವೂ ಆಕ್ರೋಶಗಳ ಸುರಿಮಳೆಗೈದರು.