dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: SSF ಕರ್ನಾಟಕ ಮಣ್ಣಲ್ಲಿ ಜನ್ಮ ತಾಳಿದ ನಿಟ್ಟಿನಲ್ಲಿ ರಾಜ್ಯಾದ್ಯಂತ ಇಂದು ಧ್ವಜ ದಿನಾಚರಣೆ ನಡೆಸಲಾಯಿತು.
SSF ತೆಕ್ಕಾರು ಯುನಿಟ್ ವತಿಯಿಂದ ಹಿದಾಯತುಲ್ ಇಸ್ಲಾಂ ಮದರಸ ತೆಕ್ಕಾರು ಇಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು.

ತಾತ್ವಿಕ ಉಲಮಾಗಳನ್ನು ಮುಂದಿರಿಸಿಕೊಂಡು ಮುನ್ನಡೆಯುವ ಪ್ರತಿಯೊಂದು ಹೆಜ್ಜೆಯೂ ಅದು ಹಿಂದೆ ಸರಿಯಬೇಕಾದ ಆವಶ್ಯ ಬಂದಿಲ್ಲ, ಅದರಲ್ಲಿ ಉಲಮಾಗಳ ನಿರ್ದೇಶನವಳಿವೆ ಅದು ಈ ಸಮಾಜವನ್ನು ಮುನ್ನಡೆಸುತ್ತದೆ ಎಂದು ಕೇಂದ್ರ ಜುಮಾ ಮಸ್ಜಿದ್ ತೆಕ್ಕಾರು ಇದರ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಅಭಿಪ್ರಾಯ ಪಟ್ಟರು.
ಅವರು SSF ಧ್ವಜಾರೋಹಣ ಗೈದು ಮಾತನಾಡಿದರು.

'; } else { echo "Sorry! You are Blocked from seeing the Ads"; } ?>

SYS ನೇತಾರ ಉಸ್ಮಾನ್ ಸಹದಿ ಉಸ್ತಾದ್ ಮಾತನಾಡಿ ರಾಜ್ಯ SSF ನ ಸಂತೋಷದ ಕ್ಷಣವಿದು ಅಲ್ಲಾಹನ ಮಾರ್ಗದೆಡೆಗೆ ಒಂದಷ್ಟು ಸಮೂಹವನ್ನು ಸಜ್ಜುಗೊಳಿಸಲು ಈ ಸಂಘಟನೆಯಿಂದ ಸಾಧ್ಯವಾಗುತ್ತಿದೆ, ಇಹಕ್ಕಿಂತಲೂ ಪರಲೋಕದ ಬಗ್ಗೆ ಚಿಂತಿಸುವ ಈ ಸಂಘಟನೆ ನಮ್ಮ ನಾಳೆಯ ಸಹಪಾಠಿಯಾಗಿದೆ ಇದರ ಜೊತೆ ಕೈ ಜೋಡಿಸಿದವ ನಿರಾಶೆಯಾಗ ಬೇಕಾಗಿಲ್ಲ ಎಂದು ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

SSF ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಇಸ್ಹಾಕ್ ಮದನಿ ಅಳಕ್ಕೆ ಮಾತನಾಡಿ ಸಾತ್ವಿಕ ಉಲಮಾಗಳ ಹಿಂಬದಿಯಲ್ಲಿ ನಿಂತು ಕಾರ್ಯಚರಿಸುವ ರಾಷ್ಟ್ರ ಕಂಡ ಸುನ್ನೀ ವಿದ್ಯಾರ್ಥಿಗಳ ಅತೀ ದೊಡ್ಡ ಸಂಘಟನೆಯಾಗಿದೆ SSF ಉಪ್ಪಿನಂಗಡಿ ಡಿವಿಷನ್ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಾಚರಣೆಗಳೊಂದಿಗೆ ತೆಕ್ಕಾರು ಯುನಿಟ್ ಮಹತ್ತರವಾಗಿ ಬೆಳೆಯುತ್ತಿದೆ ವಿದ್ಯಾರ್ಥಿಗಳ ಐತಿಹಾಸಿಕ ಮುನ್ನಡೆಗೆ ನಿಮ್ಮೆಲ್ಲ ಸಹಕಾರವಿರಲಿ ಎಂದು ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

'; } else { echo "Sorry! You are Blocked from seeing the Ads"; } ?>

ಕಾರ್ಯಕ್ರಮದಲ್ಲಿ SSF ತೆಕ್ಕಾರು ಯುನಿಟ್ ಅಧ್ಯಕ್ಷ ಶರೀಫ್ ಕೆ.ಪಿ ಅಧ್ಯಕ್ಷತೆ ವಹಿಸಿದ್ದರು.
ಜಮಾಅತ್ ಆಡಳಿತ ಸಮಿತಿ ಸದಸ್ಯರಾದ ರಶೀದ್ T,H ಸಿರಾಜ್ T,H ಗಲ್ಫ್ ಫ್ರೆಂಡ್ಸ್ ಮಾಜಿ ಅಧ್ಯಕ್ಷರಾದ ಅಶ್ರಫ್ ಲತೀಫಿ , ಜಲಾಲುದ್ದೀನ್ ಹುಮೈದಿ, ಸಿದ್ದೀಕ್ ಅಮಾನಿ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
SSF ಸರಳಿಕಟ್ಟೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕನರಾಜೆ ಕಾರ್ಯಕ್ರಮ ನಿರೂಪಿಸಿದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!