ಕೇರಳ: ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಇದರ ಅಂಗವಾಗಿ ಕೇರಳದಲ್ಲಿ ನಡೆದ ಪ್ರಜಾಪ್ರಭುತ್ವ ರಕ್ಷಿಸಿ ಗಣರಾಜ್ಯ ಉಳಿಸಿ ಕಾರ್ಯಕ್ರಮದಲ್ಲಿ PFI ಅಂಗಸಂಸ್ಥೆಯಾದ ಇಮಾಂ ಕೌನ್ಸಿಲ್ ಇದರ ನಾಯಕ ಅಫ್ಸಲ್ ಕಾಸಿಮಿ ರವರ ಬಾಷಣ ಇದೀಗ ಸುನ್ನೀ ಮುಸಲ್ಮಾನರೆಡೆಯಲ್ಲಿ ಬಾರೀ ವಿವಾದಕ್ಕೊಳಗಾಗಿದೆ.
ಪ್ರವಾದಿ ಪೈಗಂಬರರ ಹತ್ತಿರವಿದ್ದ ತಲವಾರನ್ನು ಓರ್ವ ವಶಪಡಿಸಿ ಆತ ಪೈಗಂಬರ ಹತ್ತಿರ ಬಂದು ಇನ್ನು ನಿಮ್ಮನ್ನು ಯಾರು ರಕ್ಷಿಸುತ್ತಾರೆ ಅಂದಾಗ ಅದೇ ತಲವಾರನ್ನು ಆತನ ಕೈಯಿಂದ ವಶಪಡಿಸಿ ಪೈಗಂಬರ್ ರವರು ಆತನ ತಲೆ ಬಳಿ ಹಿಡಿದು ಇವಾಗ ಯಾರು ನಿನ್ನ ರಕ್ಷಿಸುತ್ತಾರೆ ಎಂದು ಪೈಗಂಬರ್ ಕೇಳಿದ್ದಾರೆ ಎಂದು ಹಸಿ ಸುಳ್ಳು ಹೇಳಿ ಮುಗ್ದ ಜನರನ್ನು ಕೋಮುವಾದಿ ಆತಂಕ ಬಾಷಣಗಳಿಂದ ಕೆರಳಿಸುವ ನೋಡುವ ಇಂತಹ ಬಾಷಣಗಾರ ಮತ್ತು ಸಂಘಟನೆಗಳಿಂದ ಮುಸಲ್ಮಾನರು ಜಾಗೃತರಾಗಬೇಕು ಎಂದು SSF ತೀವ್ರವಾಗಿ ಹೇಳಿದೆ.
ಪೈಗಂಬರರ ಎದುರು ತಲವಾರು ಹಿಡಿದು ಪ್ರಶ್ನಿಸುತ್ತಿರುವ ಆತನ ಕೈಯಿಂದ ತಲವಾರು ಕೆಳಗೆ ಬಿಳುತ್ತೆ ಆವಾಗ ಪೈಗಂಬರ್ ಅದನ್ನು ಪಡೆದು ಪಕ್ಕಕ್ಕಿಟ್ಟು ಆತನಿಗೆ ಕ್ಷಮೆ ನೀಡಿದ್ದಾರೆ ಹೊರತು ತಲೆ ಮೇಲೆ ತಲವಾರು ಇಟ್ಟು ಪ್ರಶ್ನಿಸಿಲ್ಲ ಇದು PFI ನಾಯಕರು ಇಲ್ಲಿ ಕೋಮುವಾದಗಳನ್ನು ಸೃಷ್ಟಿಸಲು ನಡೆಸುವ ಪ್ರಯತ್ನ ಎಂದು SSF ಕಠಿಣವಾಗಿ ತಿಳಿಸಿದೆ.
ಇದೀಗಾಗಲೇ ಸುನ್ನೀ ಕಾರ್ಯಕರ್ತರು PFI ನಾಯಕನ ಈ ವಿವಾದಿತ ಬಾಷಣದಿಂದ ರೊಚ್ಚಿಗೆದ್ದಿದ್ದು ಸುನ್ನೀ ಸಮೂಹದೊಂದಿಗೆ ಕ್ಷಮೆ ಕೇಳಬೇಕೆಂದು ಮತ್ತು ಆಡಿದ ಮಾತುಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ.
PFI ನಾಯಕರ ವಿರುದ್ಧ ಮುಸಲ್ಮಾನರೇ ತಿರುಗಿ ಬಿದ್ದಿದ್ದಾರೆ.