ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಚೇರಿ ಮತ್ತು ನಾಯಕರ ಮನೆ ಮೇಲೆ ನಡೆದ NIA ದಾಳಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯೇ ಎಂಬ ಅನುಮಾನ ಮೂಡಿದೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಶಂಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಹಿಂದೆ ಸಿಮಿ ಎಂಬ ಹೆಸರಿನ ಭಯೋತ್ಪಾದಕ ಸಂಘಟನೆ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿತ್ತು ಇದೀಗ ಪಿಎಫ್‌ಐ ಸಂಘಟನೆ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆ ವಿರುದ್ಧ ದಾಳಿ ನಡೆಸಲಾಗುತ್ತಿರುವುದನ್ನು ನಮ್ಮ ಸಂಘಟನೆ ಸ್ವಾಗತಿಸುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ನಾವು ಅಂದಿನಿಂದ ಈ ಉಗ್ರ ಸಂಘಟನೆಗಳ ಮೇಲೆ ನಿಯಂತ್ರಣ ಹೇರಿ ಎಂದು ಬಿಜೆಪಿ ಸರ್ಕಾರದ ಜೊತೆ ಅದೆಷ್ಟೇ ಮನವಿ ಮಾಡಿಕೊಂಡರೂ ಕೂಡಾ ಜಾಣ ಕುರುಡೋ ದಿವ್ಯ ಮೌನವೋ ಎಂಬಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ.
ವಿಷಾದಕರ ಸಂಗತಿ ಎಂದರೆ ಹಲವು ಕಡೆಗಳಲ್ಲಿ ಬಿಜೆಪಿ ನಾಯಕರು ಎಸ್‌ಡಿಪಿಐ ಸಂದರ್ಭದಲ್ಲಿ ಎನ್‌ಐಎ ದಾಳಿ ಬೂಟಾಟಿಕೆಯ ದಾಳಿಯೋ ಅಥವಾ ನಿಜವಾದ ದಾಳಿಯೋ ಪಕ್ಷದೊಂದಿಗೆ ನಂಟು ಬೆಳೆಸಿಕೊಂಡು ಮೈತ್ರಿ ಮಾಡಿಕೊಂಡು ಅಧಿಕಾರ ಮಾಡುವ ರಾಜ್ಯದಲ್ಲಿ ಚುನಾವಣಾ ನಾಟಕ ಆರಂಭವಾಗಿದೆ.
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಎಸ್ ಡಿಪಿಐ , ಪಿಎಫ್ ಐ ನಿಷೇಧದ ಬಗ್ಗೆ ಮಾತಾಡಿತ್ತು. ಘಂಟಾಘೋಷವಾಗಿ ತಾಂಟ್ರೆ ಬಾ ತಾಂಟ್ ಎಂದು ಹೇಳಿದ ವ್ಯಕ್ತಿಯ ಬಂಧನ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದ ಬಳಿಕ ದಾಖಲೆ ಇಲ್ಲ ಎನ್ನುತ್ತಾ ಬಂದಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದರೂ ಈ ಸಂಘಟನೆಗಳ ನಿಷೇಧ ಆಗಿಲ್ಲ . 2023 ರ ಚುನಾವಣೆ ಬಳಿಕನೂ ಎಸ್ ಡಿಪಿಐ,ಪಿಎಫ್ ಐ ಬ್ಯಾನ್ ಆಗಲ್ಲ ಎಂದರು ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ತಿಳಿಸಿದರು ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಮತ್ತಿತರು ಉಪಸ್ಥಿತರಿದ್ದರು.