dtvkannada

ಬೆಂಗಳೂರು: ದೇಶಾದ್ಯಂತ PFI ನ್ನು ಬ್ಯಾನ್ ಮಾಡಿ ಮೋದಿ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿರುವುದು ಸಂತೋಷ ತಂದಿದೆ.
ಈ ನಿರ್ದಾರ ಈ ದೇಶದ ಸಮಗ್ರತೆ ಮತ್ತು ಏಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಇದು ಕೇವಲ ಬಿಜೆಪಿಯವರ ಮಾತ್ರ ಆಗ್ರಹವಾಗಿರಲಿಲ್ಲ ಎಲ್ಲಾ ಜನ ಸಾಮಾನ್ಯರ ಮತ್ತು ದೇಶದ ಎಲ್ಲಾ ಪ್ರತಿ ಪಕ್ಷಗಳ ಒಕ್ಕೂರಳದ ಆಗ್ರಹವೂ ಕೂಡ ಇದಾಗಿತ್ತು ಅದನ್ನು ಮಾನ್ಯ ಗೃಹ ಸಚಿವ ಅಮಿತ್ ಶಾ ಮಾಡಿ ತೋರಿಸಿದ್ದಾರೆ PFI ಬ್ಯಾನ್ ಮಾಡುವುದರೊಂದಿಗೆ ದೇಶದಲ್ಲಿ ವಿದ್ವಂಸಕ ಕೃತ್ಯಗಳಿಗೆ ಮತ್ತು ಅದರ ಸಂಘಟನೆಗಳಿಗೆ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಮಹತ್ವದ ಸಂದೇಶ ನೀಡಿದೆ ಎಂದು ಅವರು ಹೇಳಿದರು.

ಹರೀಶ್ ಪೂಂಜಾ ರವರ ಪೇಜಿನಿಂದ..

ಇನ್ನು ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಕೇಂದ್ರ ಸರ್ಕಾರದ ಈ ನಿರ್ದಾರವನ್ನು ಸ್ವಾಗತಿಸುತ್ತೇನೆ.ಹಲವಾರು ಸಮಯಗಳ ಆಗ್ರಹಕ್ಕೆ ಬಿಜೆಪಿ ಸರ್ಕಾರ ಉತ್ತರ ನೀಡಿದೆ.

ಇನ್ನು ರಾಜ್ಯದಲ್ಲಿ P,F,I ಹೆಸರಿನಲ್ಲಿ ಚಟುವಟಿಕೆ ನಡೆಸದಂತೆ ನಮ್ಮ ಪೊಲೀಸರು ಕಣ್ಣಿಡಲಿದ್ದಾರೆ ಎಂದರು.
ಇನ್ನು ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹಸಚಿವ PFI ನ್ನು ಒಂದು ಸಮುದಾಯದ ನಿಟ್ಟಿನಲ್ಲಿ ಬ್ಯಾನ್ ಮಾಡಿಲ್ಲ ಅದರ ವಿದ್ವಂಸಕ ಕೃತ್ಯದ ಹಿನ್ನಲೆಯಲ್ಲಿ ಬ್ಯಾನ್ ಮಾಡಿದ್ದೇವೆ.

ಮಠಂದೂರು ಹೇಳಿಕೆ ನೋಡಿ

ಸ್ವತಃ ಮುಸಲ್ಮಾನರೇ ಆ ಸಂಘಟನೆಯನ್ನು ಮೆಚ್ಚಿಕೊಂಡಿಲ್ಲ, ಈ ಮುಂಚೆನೇ ಅದೆಷ್ಟೋ ಮುಸಲ್ಮಾನ ಬಾಂಧವರು, ಗುರುಗಳು PFI ಮೇಲೆ ಕಣ್ಣಿಡುವಂತೆ ಸೂಚನೆ ನೀಡಿದ್ದರು ಮತ್ತು PFI ನಡೆಸುವ ವಿದ್ವಂಸಕ ಕಾರ್ಯಗಳಿಗೂ ಇಸ್ಲಾಂ ಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.

By dtv

Leave a Reply

Your email address will not be published. Required fields are marked *

error: Content is protected !!