ನವದೆಹಲಿ: ಕೆಲ ದಿನಗಳಿಂದ ನಡೆಯುತ್ತಿರುವ NIA ದಾಳಿ, ಪೊಲೀಸ್ ತನಿಖೆಗಳು ಮುಂತಾದವುಗಳ ನಡುವೆ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರಡಿಯಲ್ಲಿರುವ ಎಂಟು ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳವರೆಗೆ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧ ಹೇರಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಗುರಿಯಾಗಿಸಿ ದೇಶಾದ್ಯಂತ ಹಲವು ಪಿಎಫ್ಐ ಕಚೇರಿ ಮತ್ತು ನಾಯಕರ ಮನೆ ಮೇಲೆ ದಾಳಿ ಮಾಡಿತ್ತು. ನಿನ್ನೆಯೂ ಸಹ ಪಿಎಫ್ಐ ಗೆ ಸಂಬಂಧಿಸಿದ ದೇಶಾದ್ಯಂತ 250 ಕ್ಕೂ ಹೆಚ್ಚು ಜನರನ್ನು ಏಳು ರಾಜ್ಯಗಳಲ್ಲಿ ನಡೆದ ದಾಳಿಗಳಲ್ಲಿ ಬಂಧಿಸಿ ಕೆಲ ನಾಯಕರಿಗೆ ನ್ಯಾಯಾಂಗ ಬಂಧನ ನಿಡಲಾಗಿತ್ತು.
ಆದರೆ ಇದೀಗ ನಿಬ್ಬರೆಗಾಗುವಂತಹ ವರದಿ ಬಂದಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳಲ್ಲಿರುವ 8 ಸಂಸ್ಥೆಗಳನ್ನು 5 ವರ್ಷಕ್ಕೆ ನಿಷೇದ ಹೆರಲಾಗಿದೆ.
ಪಿ.ಎಫ್.ಐ ಅಡಿಯಲ್ಲಿರುವ ಅಂಗಸಂಸ್ಥೆಗಳೆಂದರೆ 1-ರೆಹಾಬ್ ಇಂಡಿಯಾ ಫೌಂಡೇಶನ್ (RIF), 2-ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI),3-ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC),4-ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ (NCHRO), 5-ನ್ಯಾಷನಲ್ ವುಮೆನ್ಸ್ ಫ್ರಂಟ್ (NWF), 6-ಜೂನಿಯರ್ ಫ್ರಂಟ್ (JF), 7-ಎಂಪವರ್ ಇಂಡಿಯಾ ಫೌಂಡೇಶನ್ (EIF) 8-ರಿಹಾಬ್ ಫೌಂಡೇಶನ್,ಇವುಗಳನ್ನು ಬರೋಬ್ಬರಿ 5 ವರ್ಷದವರೆಗೆ ಕೇಂದ್ರ ಸರಕಾರವು ನಿಷೇಧ ಹೇರಿದೆ ಎಂದು ತಿಳಿದು ಬಂದಿದೆ.