ಕಾಸರಗೋಡು: ಕುಂಬ್ರ ನಿವಾಸಿಯಾಗಿದ್ದ
ಮರ್ಹೂಂ ಪಿ.ಎಸ್ ಸುಲೈಮಾನ್‌ರವರ ಮಗ
ಹಮೀದ್ (ದಾವೂದ್) ಸೀತಾಂಗೋಳಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ಮರಣ ಹೊಂದಿದರು.
ನಿನ್ನೆ ರಾತ್ರಿ ಹಠತ್ತಾಗಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಮನೆಯವರು ಅರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ವಿಪರೀತವಾಗಿ ಬೆವರಲು ಶುರವಾಗಿದ್ದು ಸ್ವಲ್ಪ ಹೊತ್ತಿನಲ್ಲೆ ದಾರಿಮಧ್ಯೆ ಹೃದಯಾಘಾತವಾಗಿ ಮರಣ ಹೊಂದಿದರೆಂದು ತಿಳಿದು ಬಂದಿದೆ.
ಕಿರು ಪರಿಚಯ: ಜೀವನ ಸಾಗಿಸಲು ಸಿತಾಂಗೋಳಿ ಪೇಟೆಯಲ್ಲಿ ಅಂಗಡಿಯೊಂದಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಇವರು ಈ ಮೊದಲು ಕುಂಬ್ರದಲ್ಲಿ ನೆಲೆಸಿದ್ದಾಗ ವಿಧ್ಯಾಭ್ಯಸಗಳನ್ನೆಲ್ಲಾ ಪುತ್ತೂರಿನ ಕುಂಬ್ರದಲ್ಲೇ ನೆರವೆರಿಸಿ ಕಾರ್ಯನಿಮಿತ್ತ ತನ್ನ ಬದುಕನ್ನು ಕಾಸರಗೋಡಿನ ಸಿತಾಂಗೋಳಿಯತ್ತ ಮುಖಮಾಡಿದ್ದರು.
ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಇವರ ತಂದೆಯಾದ ಪಿ.ಎಸ್.ಸುಲೈಮಾನ್ ರವರು 1975 ರಿಂದ 1980 ರ ಮದ್ಯದ ಅವಧಿಯಲ್ಲಿ ಕುಂಬ್ರ ಮಂಡಲ ಪಂಚಾಯತ್ ಸದಸ್ಯರಾಗಿ ತದ ನಂತರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ಕುಂಬ್ರದಲ್ಲಿ ಬೃಹತ್ ವಾರದ ಸಂತೆ ನಡೆಯುತ್ತಿದ್ದು ಈ ಸಂತೆ ಪ್ರಾರಂಭಗೊಳ್ಳಲು ಮಂಡಲ ಪಂಚಾಯತ್‌ನಲ್ಲಿ ಇತರ ಸದಸ್ಯರೊಂದಿಗೆ ಮುಂಚೂಣಿಯಲ್ಲಿ ನಿಂತು ಪ್ರಯತ್ನ ಪಟ್ಟವರು ಈ ಪಿ ಎಸ್.ಎಸ್ ಆಗಿದ್ದರು.ಓರ್ವ ಶಿಕ್ಷಣ ಪ್ರೇಮಿಯೂ ಆಗಿದ್ದ ಇವರು ಕುಂಬ್ರ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿಯೂ ಆಯ್ಕೆಗೊಂಡಿದ್ದರು ಶೇಕಮಲೆ ಜಮಾಅತ್ ಕಮಿಟಿಯ ಸದಸ್ಯರಾಗಿ ಧಾರ್ಮಿಕವಾಗಿಯೂ ಸೇವೆ ಸಲ್ಲಿಸುತ್ತಿದ್ದ ಇವರು ಸಾಮಾಜಿಕ ಕಾರ್ಯಕರ್ತರು ಆಗಿದ್ದರು.
ಇವರ ಕುಟುಂಬದ ಸದಸ್ಯರು ಒಂದಷ್ಟು ಜನ ಪುತ್ತೂರು ತಾಲೂಕಿನಾದ್ಯಂತ ಇದ್ದರೆ ಅದೇ ರೀತಿ ಒಂದಷ್ಟು ಜನ ಕೇರಳದಲ್ಲೂ ಜೀವನ ನಡೆಸುತ್ತಿದ್ದು ಬಹಳ ಅನ್ಯೋನತೆಯ ಕುಟುಂಬವಾಗಿದ್ದು ಕೆ.ಎಸ್ ಫ್ಯಾಮಿಲಿ ಎಂದೇ ಪರಿಚಿತವಾಗಿದೆ. ಅದೇ ರೀತಿ ದಾವೂದ್‌ರವರು ಜೀವನದಲ್ಲಿ ಅಂಗವಿಕಲರಾಗಿದ್ದು ಬಹಳ ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದರು.ಆದರೂ ಇದರೆಡೆಯಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದವರನ್ನು ಗಮನಿಸಿ ಅವರಿಗೆ ಸರ್ಕಾದಿಂದ ಸಿಗುವ ಸವಲತ್ತುಗಳನ್ನು ತಾನು ಮುಂಚೂನಿಯಲ್ಲಿ ನಿಂತು ಸಾಮಾಜಿಕ ಕಾರ್ಯಕರ್ತನಾಗಿ ದುಡಿಯುತ್ತಿದ್ದರು.
ಅದೇ ರೀತಿ ಕರ್ನಾಟಕದಲ್ಲಿರುವಾಗ ಅಂದಿನ ಮಿನಿಷ್ಟರ್ ಆಗಿದ್ದ ಜನಾರ್ಧನ ಪೂಜಾರಿಯವರ ಕಛೇರಿಗೆ ಯಾರ ಪರ್ಮಿಷನ್ ಇಲ್ಲದೇ ಯಾವ ಸಂದರ್ಭದಲ್ಲಿಯೂ ನೇರವಾಗಿ ಎಂಟ್ರಿ ಕೊಡುವ ಅವಸರವನ್ನು ಇವರಿಗೆ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿರಿಯವರು ಕೊಟ್ಟಿದ್ದರು.
ಅದೇ ರೀತಿ ಈಗ ಕೇರಳದಲ್ಲಿ ಇರುವಂತಹ ತನ್ನ ಪಕ್ಷದ ನಾಯಕಾರದ ಪಿನಾರಾಯಿ ಸರ್ಕಾರದಲ್ಲಿ ಬರುವಂತಹ ಎಲ್ಲಾ ಸವಲತ್ತುಗಳನ್ನು ಬಡ ಜನರಿಗೆ ತಲುಪಿಸುವಂತಹ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದ ಇವರು ರಾಜಕೀಯವಾಗಿ ಬಹಳ ಹುಮ್ಮಸ್ಸಿನಿಂದ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಈದೀಗ ಇವರನ್ನು ಕಳೆದುಕೊಂಡ ನಾಗರಿಕರು ಹಾಗು ಕುಟುಂಬಸ್ಥರು ದುಃಖದ ಕಡಲಿನಲ್ಲಿ ಮುಲುಗಿದ್ದಾರೆ. ಅಪಾರ ಬಂಧು ಬಳಗ ಮತ್ತು ಕುಟುಂಬವನ್ನು ಅಗಲಿದ್ದ ಇವರ ಮೃತ ದೇಹವನ್ನು ಇಂದು ಮಧ್ಯಾಹ್ನ ಝುಹರ್ ನಮಾಝಿನ ಸಂಧರ್ಭ ಮಸೀದಿಯಲ್ಲಿ ಧಫನ ಮಾಡಲಾಯಿತೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇವರ ಮರಣ ವಾರ್ತೆ ಅರಿತ ಕೇರಳದಿಂದ ನಡೆದುಕೊಂಡು ಹಜ್ ಯಾತ್ರೆ ಕೈಗೊಂಡಿರುವ ಶಿಹಾಬ್ ಚೊಟ್ಟುರವರು ದುವಾ ನೇರವೆರಿಸಿದ ಕ್ಷಣದ ವೀಡಿಯೋ ವೀಕ್ಷಿಸಿ👇🏻