ಪುತ್ತೂರು: ನಗರ ಸಮೀಪದಲ್ಲಿ ಕಲ್ಲೇಗ ಮಸೀದಿಗೊಳಪಟ್ಟ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಜಾಕಿ ಗ್ರೂಪ್ಸ್ ಸಂಸ್ಥೆಯ ಮಾಲಕ ಆಫಕ್ (37)ರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪುತ್ತೂರು ಮತ್ತು ಕಬಕದ ನಡುಭಾಗದಲ್ಲಿರುವ ಹೈವೆ ರಸ್ತೆಗೆ ತಾಗಿಕೊಂಡಿರುವ ಕಲ್ಲೇಗ ಮಸೀದಿ ಬಳಿ ಕಾರ್ಯಚರಿಸುತ್ತಿರುವ ಕೆಜೆಎಂ ಬಿಲ್ಡಿಂಗ್ ನಲ್ಲಿ ಸ್ಲಿಪ್ ವೆಲ್ ಮ್ಯಾಟ್ರೇಸ್,ಡಿಸೈನರ್ ವಾಲ್ ಪೇಪರ್ಸ್,ಕರ್ಟನ್ಸ್ , ಬೆಡ್ಡಿಂಗ್,ಇಂಟೀರಿಯರ್ ಮುಂತಾದ ಗೃಹೋಪಯೋಗಿ ವಸ್ತುಗಳ ಮಳಿಗೆಯನ್ನು ತೆರೆದು ಕೊಂಡಿದ್ದರು.
ಜಾಕಿ ಗ್ರೂಪ್ಸ್ ಎಂದೇ ಪ್ರಶಸ್ತರಾಗಿದ್ದ ಇದರ ಮಾಲಕರಾದ ಬನ್ನೂರು ನಿವಾಸಿ ಆಫಕ್ ರವರು ತನ್ನದೇ ಕಛೇರಿಯ ಬಿಲ್ಡಿಂಗ್‌ನ ಮೊದಲನೇ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಕೊಂಡಿರುವುದು ಎಲ್ಲರನ್ನೂ ದಿಘ್ಬ್ರಮೆಗೊಳಿಸಿದೆ.

ಮೃತಪಟ್ಟ ಆಫಕ್‌ರವರು ವಿವಾಹಿತರಾಗಿದ್ದು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.