dtvkannada

'; } else { echo "Sorry! You are Blocked from seeing the Ads"; } ?>

ಕಲ್ಲಿಕೋಟೆ: ನಿನ್ನೆ ಹಠಾತ್ ಆಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಕ್ ಅಬೂಬಕ್ಕರ್ ಅಹ್ಮದ್ ರವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಉಸ್ತಾದ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದಂತೆ ತನ್ನ ಅಭಿಮಾನ ಬಳಗ, ಹಿತೈಷಿ ಶಿಷ್ಯವೃಂದ, ಕೋಟ್ಯಾಂತರ ಮಂದಿಗಳು ದೇಶ ವಿದೇಶಗಳಲ್ಲಿ ಉಸ್ತಾದರ ಆರೋಗ್ಯ ಪೂರ್ಣ ಆಫಿಯತ್ ಗಾಗಿ ಕಣ್ಣೀರಿನೊಂದಿಗೆ ಪ್ರಾರ್ಥನೆ ನಡೆಸಿದ್ದು, ಹಲವಾರು ವಿದ್ವಾಂಸರು ಎ. ಪಿ ಉಸ್ತಾದರ ಆಫಿಯತ್ ಗಾಗಿ ಪ್ರಾರ್ಥಿಸುವಂತೆ ಮನವಿ ಕೂಡ ಮಾಡಿದ್ದರು.

'; } else { echo "Sorry! You are Blocked from seeing the Ads"; } ?>

ಇಂದು ಮಧ್ಯಾಹ್ನ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಚೇರಿ ಉಸ್ತಾದ್ ಆರೋಗ್ಯವಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ, ಬಿ.ಪಿ ಎಲ್ಲವೂ ನಾರ್ಮಲ್ ಗೆ ತಲುಪಿದೆ ಯಾರು ಹೆದರಬೇಕಾದ ಆವಶ್ಯಕತೆ ಇಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.

ಇನ್ನು ಉಸ್ತಾದರನ್ನು ಭೇಟಿಯಾಗಲು ಯಾರು ಕೂಡ ಆಸ್ಪತ್ರೆ ಅಥವಾ ಕಚೇರಿ, ಮನೆ ಕಡೆ ಯಾರು ಕೂಡ ಬಾರದಂತೆ ಮತ್ತು ಉಸ್ತಾದರ ಮತ್ತಷ್ಟು ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಉಸ್ತಾದರ ಕಚೇರಿ ತಿಳಿಸಿದೆ.

'; } else { echo "Sorry! You are Blocked from seeing the Ads"; } ?>

ಇನ್ನು ಮೀಲಾದ್ ಸಡಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಸರಿಯಾಗಿ ನಿದ್ರಿಸದೇ ಇದ್ದಿದ್ದರಿಂದ ಉಸ್ತಾದರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಕೋಟ್ಯಂತರ ಮಂದಿಗಳ ಕಣ್ಣೀರ ಪ್ರಾರ್ಥನೆಗೆ ಉತ್ತರ ಸಿಕ್ಕಿದ್ದು ಅತೀ ಬೇಗನೆ ಹುಷಾರಾಗಿ ಬರಲಿ ಎಂಬ ಹಾರೈಕೆ ನಮ್ಮದು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!