ಕಡಬ: ಮಹಿಳೆಯೋರ್ವರ ಸರವನ್ನು ಕಿತ್ತುಕೊಂಡ ಆರೋಪದ ಮೇರೆಗೆ ಇಬ್ಬರು ಯುವಕರಿಗೆ ಗಂಭೀರ ಹಲ್ಲೆ ನಡೆಸಿದ ಘಟನೆ ಕಡಬದ ದೋಲ್ಪಾಡಿ ಎಂಬಲ್ಲಿ ಬೆಳಕಿಗೆ ಬಂದಿದೆ.

ಮಹಿಳೆ ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ಸರವನ್ನು ಕಿತ್ತುಕೊಂಡು ಕಾರಿನಲ್ಲಿ ಬಂದ ಇಬ್ಬರು ಪರಾರಿಯಾದರು ಎಂದು ಮಹಿಳೆ ಆರೋಪಿಸಿದ್ದಾರೆ. ಕೋಡಲೇ ಸ್ಥಳದಲ್ಲಿದ್ದ ಜನರು ಇಬ್ಬರನ್ನು ಬೆನ್ನಟ್ಟಿದ್ದು, ಕಾರು ಅಡ್ಡಗಟ್ಟಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಇವರು ಮನೆಮನೆಗೆ ತೆರಳಿ ಬಟ್ಟೆ ಮಾರುವ ಯುವಕರಾಗಿದ್ದು ಎಂದು ತಿಳಿದು ಬಂದಿದೆ.
ಗಾಯಾಳು ಯುವಕರ ಕುಟುಂಬಸ್ಥರಿಂದ ಪ್ರತ್ಯಾರೋಪ:- ಮನೆ ಮನೆಗೆ ಹೋಗಿ ಬೆಡ್ ಶೀಟ್ ಮಾರುವ ಇವರು ನಿನ್ನೆಯ ದಿನ ಕಡಬ ತಾಲ್ಲೂಕಿನ ಕಾಣಿಯೂರು ದೋಲ್ಪಾಡಿ ಗ್ರಾಮಕ್ಕೆ ವ್ಯಾಪಾರಕ್ಕೆಂದು ಹೋಗಿದ್ದಾರೆ. ಮಹಿಳೆ ಮಾತ್ರ ಇದ್ದ ಒಂದು ಮನೆಗೆ ಹೋಗಿ ಬೆಡ್ ಶೀಟ್ ಬೇಕಾ ಎಂದು ಕೇಳಿದಾಗ ಆ ಮಹಿಳೆ ಬೇಡ ಅಂದಿರುತ್ತಾರೆ. ಇವರು ಪದೇ ಪದೇ ತಗೊಳ್ಳಿ ಎಂದು ಒತ್ತಾಯಿಸಿದಾಗ ಆ ಮಹಿಳೆ ಬೇರೆ ಯಾರಿಗೂ ಕರೆ ಮಾಡಿ ವಿಷಯವನ್ನು ಬೇರೆ ರೀತಿಯಲ್ಲಿ ತಿಳಿಸಿದರು.
ಆ ಸಂದರ್ಭದಲ್ಲಿ ರಫೀಕ್ ಅನ್ನುವ ಯುವಕ ಓಡಿಕೊಂಡು ಬಂದು ಕಾರಿನಲ್ಲಿದ್ದ ರಮೀಝನ ಬಳಿ ಕಾರು ತೆಗೆಯಲು ಹೇಳಿ ಇವರು ಮುಂದಕ್ಕೆ ಹೋಗುವಾಗ ನಾಲಕ್ಕು ಕಡೆ ಇವರ ವಾಹಣವನ್ನು ಅಡ್ಡಗಟ್ಟಿ ತಡೆಯಲು ಪ್ರಯತ್ನಿಸುತ್ತಾರೆ. ಇವರು ವೇಗವಾಗಿ ತಪ್ಪಿಸಿಕೊಂಡು ಮುಂದಕ್ಕೆ ಹೋದಾಗ ಕಾಣಿಯೂರು ಬಳಿ 3 ದನಗಳಿದ್ದ ಪಿಕ್ ಅಪ್ ವಾಹಣವನ್ನು ಅಡ್ಡ ನಿಲ್ಲಿಸಿ ಇವರನ್ನು ತಡೆದು ಕಾರಿನಿಂದ ಹೊರ ತಂದು ಅಮಾನುಷವಾಗಿ ಗಂಭೀರ ಹಲ್ಲೆ ನಡೆಸಿರುತ್ತಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಪ್ರಖರಣ ದಾಖಲಿಸಿದ್ದು, ತನಿಖೆಯ ನಂತರವಷ್ಟೇ ಘಟನೆಯ ನೈಜತೆ ಬೆಳಕಿಗೆ ಬರಳಿದೆ.