ಪುತ್ತೂರು: ಆಮಿನ ಉಮಾಮ ಫ್ಯಾಮಿಲಿ ಇದರ ವತಿಯಿಂದ ಎರಡನೇ ವರ್ಷದ ಕುಟುಂಬ ಸಮ್ಮಿಲನ ಕಾರ್ಯಕ್ರಮ; ಹಲವು ಕುಟುಂಬಸ್ಥರು ಭಾಗಿ

ಪುತ್ತೂರು: ಆಮಿನ ಉಮಾಮ ಫ್ಯಾಮಿಲಿ ಇದರ ಎರಡನೇ ವರ್ಷದ “ಕುಟುಂಬ ಸಮ್ಮಿಲನ” ಕಾರ್ಯಕ್ರಮವೂ ಲಯನ್ಸ್ ಸೇವಾ ಮಂದಿರ, ಪುತ್ತೂರು ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಮೌಲೀದ್ ಪಾರಾಯಣದೊಂದಿಗೆ ಬೆಳಗ್ಗೆ 10:00 ಗಂಟೆಗೆ ಆರಂಭವಾದ ಕಾರ್ಯಕ್ರಮವು, ದುಃಆ ಮಜ್ಲಿಸ್’ನೊಂದಿಗೆ ಸಂಜೆ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. 18 ವರ್ಷದೊಳಗಿನ ಮಕ್ಕಳಿಗೆ ಹಾಗೂ 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಕೊನೆಗೆ ವಿಜೇತರಿಗೆ ಬಹುಮಾನ ನೀಡಲಾಯಿತು.
ಪರಸ್ಪರ ಸಂಬಂಧಗಳು ಅತ್ಯಂತ ದುರ್ಬಲವಾಗುತ್ತಿರುವ ಈ ದಿನಗಳಲ್ಲಿ ಒಂದೇ ಕುಟುಂಬದ ಎಲ್ಲಾ ಮಂದಿ ಒಂದೆಡೆ ಸೇರಿದ ಈ ಕಾರ್ಯಕ್ರಮವು ಬಹಳ ವಿಶಿಷ್ಟವಾಗಿತ್ತು.
ಇದೇ ವೇಳೆ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಬಾತಿಶ್ ಮಾಡಾವು ನಿರೂಪಿಸಿದರು.