ಗುಜರಾತ್: ಬ್ರಿಟಿಷರ ಕಾಲದ ಸೇತುವೆಯೊಂದು ದುರಸ್ತಿ ಕಂಡ ಬಳಿಕವೂ ಮತ್ತೆ ಕುಸಿದು ಬಿದ್ದು 135ಕ್ಕೂ ಮಿಕ್ಕ ಮಂದಿ ಸಾವನ್ನಪ್ಪಿದ ಬಗ್ಗೆ ಗುಜರಾತ್ ನ ಮೊರ್ಬಿಯಲ್ಲಿ ನಡೆದಿದೆ.
500ಕ್ಕೂ ಮಿಕ್ಕ ಮಂದಿ ತೂಗು ಸೇತುವೆ ಮೇಲೆ ನಿಂತಿದ್ದರು ಏಕಾಏಕಿ ಸೇತುವೆ ಕುಸಿದು ಬಿದ್ದಿದ್ದು ಸುಮಾರು ಇನ್ನೂರಕ್ಕೂ ಮಿಕ್ಕ ಮಂದಿ ನೀರುಪಾಲಾಗಿದ್ದಾರೆ.
185ಕ್ಕೂ ಹೆಚ್ಚು ಮಂದಿಗಳನ್ನು ರಕ್ಷಿಸಲಾಗಿದೆ.
ಮತ್ತಷ್ಟು ಮಂದಿ ನೀರು ಪಾಲಾದ ಶಂಕೆ ವ್ಯಕ್ತವಾಗಿದ್ದು ಶೋಧ ಕಾರ್ಯಚರಣೆ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಎನ್.ಡಿ.ಆರ್.ಎಫ್ , ಎಸ್.ಡಿ.ಆರ್.ಎಫ್ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ತಂಡಗಳು ಹಾಗು ಮುಳುಗು ತಜ್ಞರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಿತ ಸುಮಾರು ಮಿಕ್ಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಂದಿನ 24 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಈ ಸೇತುವೆಯ ದುರಸ್ತಿ ಕಾರ್ಯ ನಡೆಸಿ ಸಾರ್ವಜನಿಕರಿಗೆ ಪ್ರವೇಶಿಸಲು ಅನುವು ಮಾಡಿಕೊಟ್ಟಿತು ದುರಸ್ತಿ ಬೆನ್ನಲ್ಲೇ ಇಂತಹ ಘಟನೆ ಸಂಭವಿಸಿದೆ.
ಇನ್ನು ನೀರುಪಾಲಾದವರ ಬಗ್ಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಪ್ರಧಾನ ಮಂತ್ರಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ರವರಿಗೆ ಕರೆ ಮಾಡಿ ಘಟನೆಯ ವಿವರಗಳನ್ನು ಪಡೆದುಕೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಮೋರ್ಬಿ ನಗರವನ್ನು ಇಂದು ಸ್ವಯಂ ಪ್ರೇರಿತ ಬಂದ್ ಮಾಡಿ ಸಂತಾಪ ಸೂಚಿಸಲಾಗಿದೆ.
ಮೃತಪಟ್ಟ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 2ಲಕ್ಷ ರೂಗಳಂತೆ ಮತ್ತು ಗಾಯಾಳುಗಳಿಗೆ ತಲಾ 50,000 ರೂಗಳಂತೆ ಪರಿಹಾರ ಘೋಷಿಸಲಾಗಿದೆ.
ಇನ್ನು ಗುಜರಾತ್ ರಾಜ್ಯ ಸರ್ಕಾರ ಮೃತಪಟ್ಟ ಕುಟುಂಬಗಳಿಗೆ ತಲಾ 4 ಲಕ್ಷ ರೂಗಳು ಬಿಡುಗಡೆ ಗೊಳಿಸಿದ್ದು ಗಾಯಳುಗಳಿಗೆ ತಲಾ 50,000 ರೂ ಗಳನ್ನು ಘೋಷಿಸಿದ್ದಾರೆ.ರಾಷ್ಟಪತಿ ದ್ರೌಪದಿ ಮುರ್ಮ, ಪ್ರಧಾನಿ ಮೋದಿ ಸಹಿತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.