ಬೆಂಗಳೂರು: ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ ಮಾಡುತ್ತೇವೆ ಎಂದು ಕೆಎಂಎಫ್ (KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (ಅ.31) ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದರಂತೆ ಈಗ ನಂದಿನಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ 3 ರೂಪಾಯಿ ಏರಿಕೆ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ. ಈ
ಹೊಸ ದರ ಇಂದು (ನ.14) ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಇನ್ನು ಹೆಚ್ಚಳ ಮಾಡಲಾದ ದರವನ್ನು, ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ವರ್ಗಾವಣೆ ಮಾಡಲಾಗುವುದು ಎಂದು ಕೆಎಂಫ್ ತಿಳಿಸಿದೆ.
ಯಾವ ಹಾಲಿಗೆ ಎಷ್ಟು ದರ ಇಲ್ಲಿದೆ ವಿವರ:
ಟೋನ್ಡ್ ಹಾಲು 37 ರೂ ರಿಂದ 40 ರೂಗೆ ಏರಿಕೆ
ಹೋಮೋಜಿನೈಸ್ಡ್ ಹಾಲು 38 ರೂ ರಿಂದ 41 ರೂಗೆ ಏರಿಕೆ
ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ ರಿಂದ 45 ರೂಗೆ ಏರಿಕೆ
ಸ್ಪೆಷಲ್ ಹಾಲು 43 ರೂ ರಿಂದ 46 ರೂಗೆ ಏರಿಕೆ
ಶುಭಂ ಹಾಲು 43 ರೂ ರಿಂದ 46 ರೂಗೆ ಏರಿಕೆ
ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ ರಿಂದ 47 ರೂಗೆ ಏರಿಕೆ
ಸಮೃದ್ಧಿ ಹಾಲು 48 ರೂ ರಿಂದ 51 ರೂಗೆ ಏರಿಕೆ
ಸಂತೃಪ್ತಿ ಹಾಲು 50 ರೂ ರಿಂದ 53 ರೂಗೆ ಏರಿಕೆ
ಡಬಲ್ ಟೋನ್ಡ್ ಹಾಲು 36 ರೂ ರಿಂದ 39 ರೂಗೆ ಏರಿಕೆ
ಮೊಸರು ಪ್ರತಿ ಲೀ. 45 ರೂ ರಿಂದ 48 ರೂಗೆ ಏರಿಕೆ
ಸದ್ಯ ಇರುವ ಬೇರೆ ಬೇರೆ ಹಾಲುಗಳ ದರ
ನಂದಿನಿ 37 ರೂ
ದೊಡ್ಲ 44 ರೂ
ಜೆರ್ಸಿ 44 ರೂ
ಹೆರಿಟೇಜ್ 48 ರೂ
ತಿರುಮಲ 48 ರೂ
ಗೋವರ್ಧನ್ 46 ರೂ
ಆರೋಗ್ಯ 50 ರೂ