';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಪ್ರಿತಿಸುವ ಯುವಕ ಯುವತಿಯರಿಗೆ ಶಾಕಿಂಗ್ ನ್ಯೂಸ್ ಅನ್ನಬಹುದು ಯಾಕೆಂದರೆ ಪ್ರೇಮ ಪ್ರಕರಣದ ನಂತರ ಮದುವೆಯಾಗುವುದಿಲ್ಲ ಎಂದು ಹೇಳುವುದು ಮೋಸವಲ್ಲ ಮತ್ತು ಈ ಪ್ರಕರಣಗಳಲ್ಲಿ ಐಪಿಸಿ 420 ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಇಬ್ಬರು ಪ್ರೇಮಿಗಳು ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರೂ ಮದುವೆಯಾಗದ ರಾಮಮೂರ್ತಿನಗರದ ಯುವಕನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕರ್ನಾಟಕ ಹೈಕೋರ್ಟ್ ಹೇಳಿದೆ.
ರಾಮಮೂರ್ತಿನಗರದ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಿಯಕರ ಹಾಗೂ ಮನೆಯವರು ತನಗೆ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು ಎನ್ನಲಾಗಿದೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಮದುವೆಯಾಗುವ ಭರವಸೆಯನ್ನು ಉಲ್ಲಂಘಿಸುವುದನ್ನು ವಂಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕ ಪೀಠ ಅಭಿಪ್ರಾಯಪಟ್ಟಿದೆ ಎಂದು ತಿಳಿದು ಬಂದಿದೆ.