dtvkannada

'; } else { echo "Sorry! You are Blocked from seeing the Ads"; } ?>

ಕಲ್ಲಿಕೋಟೆ: ಸಮಸ್ತ ಕೇರಳ ಜಂಯಿಯ್ಯತುಲ್ ಉಲಮಾ ಇದರ ಕಾರ್ಯದರ್ಶಿ ಖ್ಯಾತ ವಿದ್ವಾಂಸ ಕಾಂತಪುರಂ ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಇಂದು ಬೆಳಗ್ಗೆ 6 ಗಂಟೆ ಹೊತ್ತಿಗೆ ಅನಾರೋಗ್ಯ ಹಿನ್ನೆಲೆ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕಳೆದ ಒಂದು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಸ್ತಾದ್ ಆದಿತ್ಯವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.

'; } else { echo "Sorry! You are Blocked from seeing the Ads"; } ?>

ಕಾಂತಪುರಂ ಎ. ಪಿ ಉಸ್ತಾದರ ಅದೇ ಛಾಯೆಯನ್ನು ಹೋಲಿರುವ ಉಸ್ತಾದ್ ಚೆರಿಯೇ (ಸಣ್ಣ) ಎ.ಪಿ ಉಸ್ತಾದ್ ಎಂದೇ ಪ್ರಖ್ಯಾತಿ ಹೊಂದಿದ್ದಾರೆ.
ಕೇರಳದ ಮರ್ಕಝ್ ನಲ್ಲಿ ಮುದರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಸ್ತಾದ್ ಸುಲ್ತಾನುಲ್ ಉಲಮಾ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಿಸಲಾದಾಗ ಅವರ ಸ್ಥಾನಗಳನ್ನು ಬಹುತೇಕ ಇವರೇ ತುಂಬಿದ್ದರು.

ಇಂದು ಬೆಳಿಗ್ಗೆ 9 ಗಂಟೆಗೆ ಮರ್ಕಝ್ ನಲ್ಲಿ ಉಸ್ತಾದರ ಮಯ್ಯತ್ ನಮಾಜ್ ನಿರ್ವಹಿಸಿ ಅಲ್ಲಿಗೆ ಆಗಮಿಸುವ ಸಾವಿರಾರು ಅಭಿಮಾನಿ ಹಿತೈಷಿ ಶಿಷ್ಯಂದಿರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿ ದಫನ ಕಾರ್ಯಗಳಿಗಾಗಿ ಸಂಜೆ 4 ಗಂಟೆಗೆ ಕರುವಾಂಪೊಯಿಲ್ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!