ಬೆಳ್ತಂಗಡಿ: ಕಾಡಿನ ವಿಷಪೂರಿತ ಅಣಬೆ ತಿಂದು ತಂದೆ ಮತ್ತು ಮಗ ಇಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ಮೀಯಾರೂಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಅವರ ಪುತ್ರ ಓಡಿ(45) ಎಂದು ಗುರುತಿಸಲಾಗಿದೆ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಗುರುವ ರವರ ಕುಟುಂಬ ಗುರುವ ಸಹಿತ ಇಬ್ಬರು ಮಕ್ಕಳು ವಾಸವಾಗಿದ್ದರು.
ಬಡತನದ ಬೇಗೆಯಲ್ಲಿ ಆಹಾರಕ್ಕೆ ಏನೂ ಇಲ್ಲದಿದ್ದಾಗ ಪೊದೆಗಳಲ್ಲಿ ಸಿಗುವ ಅಣಬೆ ಎನ್ನು ಪದಾರ್ಥ ಮಾಡಿ ತಿಂದಿದ್ದಾರೆ ಎಂದು ತಿಳಿದು ಬಂದಿದೆ.
ಅಣಬೆ ವಿಷಪೂರಿತ ಎಂದು ಅರಿಯದೇ ತಿಂದಿರಬಹುದು, ಮತ್ತೊಬ್ಬ ಮಗ ಮನೆಯಲ್ಲಿ ಇರಲಿಲ್ಲ ಆ ನಿಟ್ಟಿನಲ್ಲಿ ಮತ್ತೊಂದು ಅವಘಡ ತಪ್ಪಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಬಡತನದ ಬೇಗೆಗೆ ಎರಡು ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದ್ದು ಈ ಘಟನೆ ತುಂಬಾನೇ ದುಃಖ ತರಿಸುವಂತಿದೆ.
ಸ್ಥಳಕ್ಕೆ ಧರ್ಮಸ್ಥಳ ಠಾಣಾಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.ಸ್ಪಷ್ಟವಾದ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.