';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಮಂಗಳೂರು ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ನಡೆದ ಬಗ್ಗೆ ವರದಿ ಬಂದಿದ್ದು ಈ ಬಗ್ಗೆ ಹಲ್ಲೆಗೊಳಗಾದ ಯುವಕನಿಂದ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಘಟನೆಯು ಮಂಗಳೂರಿನ ನಂತೂರು ಸರ್ಕಲ್ ಬಳಿ ನಿನ್ನೆ ಈ ನಡೆದಿದೆಯೆಂದು ಪೊಲೀಸರಿಂದ ವರದಿಯಾಗಿದೆ.
ಕಾರ್ಕಳದಿಂದ ಖಾಸಾಗಿ ಬಸ್ಸೊಂದರಲ್ಲಿ ಬರುತ್ತಿದ್ದ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿಯನ್ನು ನಗರದ ನಂತೂರಿನಲ್ಲಿ ಬಸ್ಸನ್ನು ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದು ಹಲ್ಲೆಗೊಳಗಾದ ಯುವಕ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆಂದು ತಿಳಿದು ಬಂದಿದೆ.