ಮಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಲು ಸಾಲು ಅರ್ಜಿ ಸಲ್ಲಿಕೆಯಾಗಿದ್ದು ಜಿಲ್ಲೆಯ ಒಟ್ಟು 8 ಕ್ಷೇತ್ರಗಳಿಂದ ಒಟ್ಟು 41 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು ಕೆಪಿಸಿಸಿಗೆ 77 ಲಕ್ಷ ರೂಪಾಯಿ ದೇಣಿಗೆ ಸಂದಾಯ ಮಾಡಿದ್ದಾರೆ.
ಸಾಮಾನ್ಯ ಕ್ಷೇತ್ರಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಸುಳ್ಯ ಮೀಸಲು ಕ್ಷೇತ್ರದಿಂದ ಪರಿಶಿಷ್ಟ ಜಾತಿಯ ಆಕಾಂಕ್ಷಿಗಳು ತಲಾ 1 ಲಕ್ಷ ರೂಪಾಯಿಯಂತೆ ಅರ್ಜಿ ಜೊತೆ ಮೊತ್ತ ಪಾವತಿ ಮಾಡಿದ್ದಾರೆ. 36 ಅಭ್ಯರ್ಥಿಗಳು 72 ಲಕ್ಷ ರೂಪಾಯಿ ಮತ್ತು ಮೀಸಲು ಕ್ಷೇತ್ರದಿಂದ ಐದು ಸೇರಿ ಒಟ್ಟು 77 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನವಾಗಿರುವ ನವೆಂಬರ್ 21ರ ಸಂಜೆ ತನಕ ರಾಜ್ಯದಲ್ಲಿ 1,200ಕ್ಕಿಂತ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, 25 ಕೋಟಿ ರೂಪಾಯಿ ಡಿಡಿ ಪಾವತಿಯಾಗಿದೆ. ಇನ್ನೂ ಹೆಚ್ಚು ಆಕಾಂಕ್ಷಿಗಳಿದ್ದರೂ ಇಷ್ಟರಲ್ಲೇ ಅವಧಿ ಮುಗಿದಿತ್ತು. ಅರ್ಜಿಗೆ ಕೂಡಾ ತಲಾ 5 ಸಾವಿರ ರೂಪಾಯಿ ಡಿಡಿ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಅತೀ ಹೆಚ್ಚು ಅಂದರೆ 10 ಅರ್ಜಿ ಸಲ್ಲಿಕೆಯಾಗಿದ್ದರೆ, ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರದಿಂದ ತಲಾ 8 ಅರ್ಜಿ ಸಲ್ಲಿಸಲಾಗಿದೆ. ಸುಳ್ಯದಿಂದ 5, ಬಂಟ್ವಾಳ ಮತ್ತು ಬೆಳ್ತಂಗಡಿ ಕ್ಷೇತ್ರದಿಂದ ತಲಾ 3 ಹಾಗೂ ಮಂಗಳೂರು ಕ್ಷೇತ್ರದಿಂದ ಕೇವಲ 1 ಅರ್ಜಿ ಸಲ್ಲಿಸಲಾಗಿದೆ.
ಮಂಗಳೂರು ದಕ್ಷಿಣ ಕ್ಷೇತ್ರದಿಂದ ಮಾಜಿ ಶಾಸಕ ಜೆ ಆರ್ ಲೋಬೋ, ಐವನ್ ಡಿ ಸೋಜಾ, ಶಾಲೆಟ್ ಪಿಂಟೋ, ಎ ಸಿ ವಿನಯರಾಜ್, ಲಾರೆನ್ಸ್ ಡಿ ಸೋಜ, ಮೆರಿಲ್ ರೇಗೋ, ವಿಶ್ವಾಸ್ ಕುಮಾರ್ ದಾಸ್, ಆಶಿತ್ ಪಿರೇರಾ, ಮಂಗಳೂರು ಉತ್ತರ ಕ್ಷೇತ್ರದಿಂದ ಬಿ ಎ ಮೊಯ್ದಿನ್ ಬಾವ, ಇನಾಯತ್ ಅಲಿ, ಅಲ್ತಾಫ್ ಸುರತ್ಕಲ್, ಲುಕ್ಕಾನ್ ಬಂಟ್ವಾಳ, ಕವಿತಾ ಸನಿಲ್, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾಯಿ,ಪದ್ಮನಾಭ ಕೋಟ್ಯಾನ್
ಮಂಗಳೂರು ಕ್ಷೇತ್ರದಿಂದ ಯು.ಟಿ ಖಾದರ್, ಮೂಡುಬಿದಿರೆಯಿಂದ ಮಿಥುನ್ ರೈ, ರಾಜಶೇಖರ ಕೋಟ್ಯಾನ್, ಪ್ರತಿಭಾ ಕುಳಾಯಿ, ಬಂಟ್ವಾಳದಿಂದ ಬಿ ರಮಾನಾಥ ರೈ, ರಾಕೇಶ್ ಮಲ್ಲಿ ಅಶ್ವನಿ ಕುಮಾರ್ ರೈ, ಬೆಳ್ತಂಗಡಿ ಕ್ಷೇತ್ರದಿಂದ ವಸಂತ ಬಂಗೇರ, ಗಂಗಾಧರ ಗೌಡ, ರಕ್ಷಿತಾ ಶಿವರಾಮ್, ಪುತ್ತೂರಿನಿಂದ ಶಕುಂತಲಾ ಶೆಟ್ಟಿ, ಹೇಮನಾಥ ಶೆಟ್ಟಿ,ವಿಶ್ವನಾಥ ರೈ, ಚಂದ್ರಹಾಸ ಶೆಟ್ಟಿ, ಎಂ ಎಸ್ ಮೊಹಮ್ಮದ್, ಭರತ್ ಮುಂಡೋಡಿ, ಸತೀಶ್ ಕೆಡೆಂಜಿ, ದಿವ್ಯಪ್ರಭಾ ಚಿಲ್ಲಡ್ಕ, ಮಮತಾ ಡಿ ಎಸ್ ಗಟ್ಟಿ, ಕೃಪಾ ಆಳ್ವ, ಡಾ ರಾಜಾರಾಮ್, ಸುಳ್ಯದಿಂದ ಅಭಿಷೇಕ ಬೆಳ್ಳಿಪ್ಪಾಡಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ನಂದುಕುಮಾರ್, ಕೃಷ್ಣಪ್ಪ, ಅಪ್ಪಿ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.
ಕಾಂಗ್ರೆಸಿನ ಈ ರೀತಿಯ ನಿರ್ಧಾರ ಹಾಗೂ ಚುನಾವಣೆಗೆ ಮುನ್ನವೇ ಈ ರೀತಿಯಾಗಿ ದೇಣಿಗೆ ಸಂಗ್ರಹ ಮಾಡಿರುವ ವಿಚಾರವಾಗಿ ಮುಂದಕ್ಕೆ ಇದು ಟ್ರೋಲಿಗರಿಗೆ ಹಾಗೂ ವೀರೋದ ಪಕ್ಷದ ಆಡಳಿತಗಾರರಿಗೆ ಆಹಾರವಾಗಬಹುದೇ ಎಂದು ಕಾದು ನೋಡಬೇಕಾಗಿದೆ.