ಮಂಗಳೂರು: SDPI ಗುರುಪುರ ಪಂಚಾಯತ್ ಸಮಿತಿಯ ವತಿಯಿಂದ ಮಾಹಿತಿ ಹಾಗೂ ನಾಗರಿಕ ಸೇವಾ ಕೇಂದ್ರದ ಉದ್ಘಾಟನೆಯು ಇಂದು ನಡೆಯಲಿದ್ದು, ಉದ್ಘಾಟನೆ ಕಾರ್ಯಕ್ರಮಕ್ಕೆ SDPI ರಾಜ್ಯಾಧ್ಯಕ್ಷ ಮಜೀದ್ ಮೈಸೂರ್ ರವರು ಆಗಮಿಸಲಿದ್ದಾರೆ.
ಸೇವಾ ಕೇಂದ್ರದ ಉದ್ಘಾಟನೆಯನ್ನು SDPI ಕರ್ನಾಟಕ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಉದ್ಘಾಟಿಸಲಿದ್ದು, SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಯಾಸಿನ್ ಅರ್ಕುಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗುರುಪುರ ಪಂಚಾಯತ್ ಸಮಿತಿಯ ಅಧ್ಯಕ್ಷ ಎ.ಕೆ.ಮುಸ್ತಾಪ, ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಅಶ್ರಫ್, ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ.ರಿಯಾಝ್, ಮೊಹಮ್ಮದ್ ಅಶ್ರಫ್,ಸಾಹಿಕ್, ಮನ್ಸೂರ್, ಅಝ್ಮೀನ,ಬುಶ್ರಾ, ಮರಿಯಮ್ಮ,ಸಫಾರ,ರೆಹನಾ ಹಾಗೂ ಇನ್ನಿತರ ರಾಜಕೀಯ ಸಾಮಾಜಿಕ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.