ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಬಹಳಷ್ಟು ವೈರಲ್ ಆಗಿದ್ದಲ್ಲದೇ ಅತೀ ಹೆಚ್ಚು ವಿವ್ಸ್ ಕುಡ ಆಗುತ್ತಿದ್ದು ಆದರೆ ಇದೀಗ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಧರಿಸಿದ್ದ ಬಿಕಿನಿ ಬಣ್ಣದ ಕುರಿತಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಸಿನೆಮಾವನ್ನು ಬಾಯ್ಕಾಟ್‌ಗೆ ಕರೆ ನೀಡಿದ್ದಾರೆಂರು ತಿಳಿದು ಬಂದಿದೆ.

ಶಾರುಖ್ ಖಾನ್ ಅವರ ಹೊಸ ಸಿನಿಮಾ ‘ಪಠಾಣ್’ ಬಿಡುಗಡೆಗೆ ಇನ್ನೇನು ಸಜ್ಜಾಗುತ್ತಿರುವಾಗಲೇ ಆ ಚಿತ್ರದ ಬೇಷರಂ ರಂಗ್ ಎಂಬ ಹಾಡು ವಿರುದ್ಧ ವಿವಾದಗಳು ಹುಟ್ಟಿಕೊಳ್ಳತೊಡಗಿದೆ.
ಇನ್ನು ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಬಹಳಷ್ಟು ಹಾಟ್ ಆಂಡ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದು ಇದು ಅಶ್ಲೀಲವಾಗಿದೆ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಬೇಷರಮ್ ರಂಗ್ ಅಂದ್ರೆ ನಾಚಿಕೆಯಿಲ್ಲದ ಬಣ್ಣ ಎಂಬರ್ಥದಲ್ಲಿ ಬರುವ ಈ ಹಾಡಿಗೆ ಅನೇಕರು ಕಮೆಂಟ್ ಮಾಡಿ ಗರಂ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ದೀಪಿಕಾ ಧರಿಸಿದ ಬಿಕಿನಿಯ ಬಣ್ಣದ ಬಗ್ಗೆಯೂ ತಕರಾರು ತೆಗೆಯಲಾಗಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ #BoycottPathaan ಎಂಬ ಬರಹದಲ್ಲಿ ಶುರುವಾಗಿದ್ದು ಇದು ಹೀಗೆಯೇ ಮುಂದುವರಿದರೆ ‘ಪಠಾಣ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆಯೆಂದು ಮಾತಾಡಿಕೊಳ್ಳುತ್ತಿದ್ದಾರೆ.

ಬೇಷರಂ ರಂಗ್ ಗೀತೆಯನ್ನು ಗ್ಲಾಮರಸ್ ಆಗಿ ಚಿತ್ರಿಸಲಾಗಿದ್ದು ಇದೊಂದು ‘ಅಶ್ಲೀಲ ಸಾಂಗ್’ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಣೆಪಟ್ಟಿ ಕೂಡ ಕಟ್ಟುತ್ತಿರುವುದು ಕಂಡು ಬಂದಿದೆ.