ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಬಸ್ಸಿನ ನಿರ್ವಾಹಕ ಸೇರಿ ಸಂಘ ಪರಿವಾರ ನಡೆಸಿರುವ ಮಾರಣಾಂತಿಕ ಹಲ್ಲೆ ಗೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ಸಂಘಪರಿವಾರದ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಕೆಲವೇ ಹೊತ್ತಿನಲ್ಲಿ ಬಿಡುಗಡೆ ಮಾಡಿರುವ ಘಟನೆ ನಡೆದಿದೆ.

ಬಿಸಿರೋಡ್ ನಿಂದ ಮೂಡಬಿದ್ರೆ ಗೆ ಸಂಚರಿಸುತ್ತಿದ್ದ ಮೇಸ್ತ್ರಿ ಇಸಾಕ್ ಎಂಬವರಿಗೆ ಮಹಾ ಗಣೇಶ್ ಬಸ್ಸಿನ ನಿರ್ವಾಹಕ ಸೇರಿ ಸಂಘ ಪರಿವಾರದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದರು.
ತೀವ್ರವಾದ ಗಾಯಗಳೊಂದಿಗೆ ಇಸಾಕ್ ರವರು ಮಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಆರೋಪಿಗಳನ್ನು ಶಿಕ್ಷಿಸಬೇಕಾದ ಕಾನೂನು ಸಂರಕ್ಷಿಸುತ್ತಿದ್ದು ತೀವೃ ಸ್ವರೂಪದ ಹಲ್ಲೆ ಮಾಡಿದ ಸಂಘ ಪರಿವಾರದ ಕಾರ್ಯಕರ್ತರಾದ ಮನೋಹರ್, ಚೇತನ್, ಮತ್ತು ಕಿಶೋರ್ ಎಂಬವರ ವಿರುದ್ಧ ಐಪಿಸಿ ಕಾಲಂ 504,506,323,324,342,352 ಹಾಗು 341PC ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಠಾಣೆ ಜಾಮೀನು ನಲ್ಲಿ ಕಳೆದ ರಾತ್ರಿಯೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.