ಕೇರಳ: ಒಂದು ತಿಂಗಳ ರಜೆ ಕಳೆದು ಮತ್ತೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ ಚೇರಿಯೆ ಪರಂಭ್ ನಿವಾಸಿ ಸಿ.ಪಿ ಝಾಕೀರ್(44) ಎಂಬವರು ಹೃದಯಾಘಾತದಿಂದ ಮರಣ ಹೊಂದಿದ ಘಟನೆ ನಿನ್ನೆ ಸಂಭವಿಸಿದೆ.

ತನ್ನ ಹಿರಿಯ ಮಗ ಸಹಿತ ವಿದೇಶದಲ್ಲಿರುವ ಝಾಕಿರ್ ರವರು ಎರಡು ದಿನಗಳ ಹಿಂದೆಯಷ್ಟೇ ಊರಿನಿಂದ ಮರಳಿ ವಿದೇಶಕ್ಕೆ ಮರಳಿದ್ದರು
ಊರಿನಿಂದ ಬಂದ ಮರುದಿನ ಬೆಳಿಗ್ಗೆ ಸಮಯವಾದರು ಝಾಕಿರ್ ರವರು ಎದ್ದೇಳದೇ ಇದ್ದಾಗ ಮಗ ಬಂದು ಎಚ್ಚರಿಸಿದಾಗ ತಂದೆ ಮರಣ ಹೊಂದಿದ್ದು ದೃಢವಾಗುತ್ತದೆ.

ಝಾಕಿರ್ ರವರು ಊರಿನಿಂದ ಮರಳುವ ಸಂದರ್ಭದಲ್ಲಿ ಕೊನೆಯ ಬಾರಿಗೆ ತನ್ನ ತಾಯಿಯ ಕೈಯಿಂದ ಊಟ ಮಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ತನ್ನ ತಾಯಿ ಪ್ರೀತಿಯಿಂದ ತನ್ನ ಮಗನಿಗೆ ಊಟ ಮಾಡಿಸುವ ವೀಡಿಯೋ ಎಲ್ಲರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಅಜ್ಜಿ ತನ್ನ ತಂದೆಗೆ ಕೈ ತುತ್ತು ನೀಡುವ ವೀಡಿಯೋವನ್ನು ಝಾಕಿರ್ ರವರ ಪುತ್ರಿ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.
ತನ್ನ ತಾಯಿಯ ಕೈಯಿಂದ ಕೊನೆಯ ತುತ್ತು ಉಣ್ಣುವ ಬಾಗ್ಯ ಆವರದ್ದಾಗಿತ್ತು ಎಂದು ಕೆಲವರು ಆ ವೀಡಿಯೋ ದ ಅಡಿ ಬರೆದುಕೊಂಡಿದ್ದಾರೆ.
ತಾಯಿ ತನ್ನ ಮಗನಿಗೆ ಕೈ ತುತ್ತು ಉಣ್ಣಿಸುವ ವೀಡಿಯೋ ಅಂತೂ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬುತ್ತದೆ.
ವೀಡಿಯೋ ವೀಕ್ಷಿಸಿ👇