dtvkannada

'; } else { echo "Sorry! You are Blocked from seeing the Ads"; } ?>

ಕಾಸರಗೋಡು: ಇನ್ನು ೧೯ ವರ್ಷ ತುಂಬದ ಯುವತಿಯೋರ್ವಳಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯೊಂದು ಕಾಸರಗೋಡು ಜಿಲ್ಲೆಯ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರು ಕಟು ಕಾಮುಕರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಈ ಒಂದು ಕೃತ್ಯದಲ್ಲಿ ಭಾಗಿಯಾಗಿದ್ದ ಮಧೂರು ಪಟ್ಲದ ಜೆ.ಶೈನಿತ್ ಕುಮಾರ್ (30) ಉಪ್ಪಳ ಮಂಗಲ್ಪಾಡಿಯ ಮೋಕ್ಷಿತ್ ಶೆಟ್ಟಿ (43) ಮತ್ತು ಉಳಿಯತ್ತಡ್ಕದ ಎನ್.ಪ್ರಶಾಂತ್ (27) ಬಂಧಿತ ಆರೋಪಿಗಳು.

'; } else { echo "Sorry! You are Blocked from seeing the Ads"; } ?>

ಆರೋಪಿಗಳನ್ನು ಕಾಸರಗೋಡು ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಪಿ.ಚಂದ್ರಿಕಾ ನೇತೃತ್ವದ ತಂಡವು ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಾಗೂಮಧ್ಯವರ್ತಿಯಾಗಿದ್ದ ಕಾಞಂಗಾಡಿನ ಮಹಿಳೆಯೋರ್ವಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆಯೆನ್ನುವ ವಿವರ ಲಭ್ಯವಾಗಿದೆ.

ಆರ್ಥಿಕವಾಗಿ ಬಡತನದಲ್ಲಿರುವ ಕುಟುಂಬದ ಯುವತಿಗೆ ಆಮಿಷ ಒಡ್ಡಿ ತಂಡವು ಈ ಕೃತ್ಯ ನಡೆಸಿದ್ದು, ಪಾನೀಯದಲ್ಲಿ ಮಾದಕ ವಸ್ತು ಬೆರೆಸಿ ನೀಡಿ ನಂತರ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಗಿದೆ.

'; } else { echo "Sorry! You are Blocked from seeing the Ads"; } ?>

ನೆರೆಮನೆಯ ಯುವಕನೋರ್ವ ಈಕೆಯನ್ನು ಪ್ರೀತಿಸುವ ನಾಟಕವಾಡಿ ಬಳಿಕ ವಿವಾಹವಾಗುವ ಭರವಸೆ ನೀಡಿ ವಿವಿಧೆಡೆಗೆ ಕರೆದೊಯ್ದಿದ್ದು, ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಇದಲ್ಲದೆ ಮಧ್ಯವರ್ತಿಯಾದ ಮಹಿಳೆ ಮೂಲಕ ಇತರರಿಗೂ ಯುವತಿಯನ್ನು ಒಪ್ಪಿಸಿದ್ದು ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಕಾಸರಗೋಡು, ಮಂಗಳೂರು, ಚೆರ್ಕಳ, ತ್ರಿಶೂರು ಮೊದಲಾದೆಡೆಗಳೆಲ್ಲ ಕರೆದುಕೊಂಡು ಹೋಗಿ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿ ಬೇಕಾದಾಗೆ ಇವರು ಸೇರಿಕೊಂಡ್ಡು ಅತ್ಯಾಚಾರ ನಡೆಸಿದ್ದರೆನ್ನಲಾಗಿದೆ.

ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಪರಿಣಾಮ ಮಾನಸಿಕ – ಅರೋಗ್ಯ ಸಮಸ್ಯೆ ತಲೆದೋರಿದ್ದು, ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೌನ್ಸಿಲಿಂಗ್‌ ನಡೆಸಿದ್ದು,ಈ ಸಂದರ್ಭದಲ್ಲಿ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿವೆ.

ಬಳಿಕ ಪೊಲೀಸರು ಯುವತಿಯಿಂದ ಮಾಹಿತಿ ಪಡೆದು ತನಿಖೆ ನಡೆಸಿದ್ದರು. ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.ಬುದ್ದಿವಂತರ,ವಿಧ್ಯಾವಂತರ ನಾಡಾದ ಕೇರಳದಲ್ಲಿ ಇಂತಹ ಘಟನೆ ನಡೆದಿದ್ದು ನಂಬಲಾಸಧ್ಯಾವಾಗಿದ್ದು ಇದರಲ್ಲಿ ಕೈ ಜೋಡಿಸಿರುವ ಮಧ್ಯವರ್ತಿಯಾಗಿದ್ದ ಮಹಿಳೆಯ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!