dtvkannada

'; } else { echo "Sorry! You are Blocked from seeing the Ads"; } ?>

ಸುಳ್ಯ: ಪದವಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಶರಣಾಗಿರುವ ಘಟನೆ ಸುಳ್ಯದ ಕುರುಂಜಿಭಾಗ್ ಸಮೀಪ ಇರುವ ಬಿಸಿಎಂ ಹಾಸ್ಟೆಲ್ ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯು ಬೆಂಗಳೂರು ಮೂಲದ ಸುಳ್ಯ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸೋನಿಯಾ (18) ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಸೋನಿಯಾ ಬೆಂಗಳೂರು ರಾಮನಾಥ ಪುರದ, ಕೋರಮಂಗಲ ತಾಲೂಕಿನ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ ಎಂಬವರ ಪುತ್ರಿಯಾಗದ್ದು ಸೋನಿಯಾ ಇಂದು ಕಾಲೇಜಿಗೆ ಹೋಗದೇ ಹಾಸ್ಟೇಲ್ ನಲ್ಲಿ ಉಳಿದುಕೊಂಡಿದ್ದಳೆಂದು ವರದಿಯಾಗಿದೆ.

ಮದ್ಯಾಹ್ನ ಆಕೆಯ ರೂಂ ನಲ್ಲಿದ್ದ ಇನ್ನೊಬ್ಬಳು ವಿದ್ಯಾರ್ಥಿನಿ ಊಟದ ತಟ್ಟೆ ತರಲೆಂದು ರೂಂಗೆ ಹೋದಾಗ ಬಾಗಿಲು ಹಾಕಿದ್ದು ಬಾಗಿಲು ತಟ್ಟಿದ್ದರೂ ಬಾಗಿಲು ತೆರೆದಿರಲಿಲ್ಲ.

'; } else { echo "Sorry! You are Blocked from seeing the Ads"; } ?>

ಆಕೆ ಮಲಗಿರಬಹುದು ಎಂದು ಭಾವಿಸಿ ಗೆಳತಿಯ ತಟ್ಟೆಯಲ್ಲಿ ಊಟ ಮುಗಿಸಿ ಮತ್ತೆ ರೂಮಿಗೆ ಬಂದಾಗಲೂ ಬಾಗಿಲು ತೆರೆಯದೇ ಇದ್ದ ಕಾರಣ ಸಂಶಯಗೊಂಡ ವಿದ್ಯಾರ್ಥಿನಿ ವಾರ್ಡನ್ ಗೆ ಮಾಹಿತಿ ನೀಡಿದ್ದು, ಇಲಾಖೆಯ ಸಿಬ್ಬಂದಿಗಳು ಬಂದು ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಪೋಲಿಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸ್ ಐ ದಿಲೀಪ್ ಕುಮಾರ್, ಮೊದಲಾದವರು ಆಗಮಿಸಿದ್ದು ವಿದ್ಯಾರ್ಥಿನಿ ಮೃತದೇಹವನ್ನು ಮಹಜರಿಗೆ ಸಾಗಿಸಲಾಗಿದೆ.ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!