ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ (Heeraben) ಇಂದು (ಶುಕ್ರವಾರ) ಬೆಳಗಿನ ಜಾವ 3.30ರ ಸುಮಾರಿಗೆ ನಿಧನರಾಗಿದ್ದಾರೆ. 100 ವರ್ಷದ ಹೀರಾಬೆನ್ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ 2 ದಿನಗಳ ಹಿಂದೆ ಅಹಮದಾಬಾದ್‌ನ ಯುಎನ್ ಮೆಹ್ತಾ ಕಾರ್ಡಿಯಾಲಜಿ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಈಗಾಗಲೇ ಗಾಂಧಿನಗರಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ತಾಯಿಯ ಅಂತಿಮ ದರ್ಶನ ಪಡೆದರು. ಹೀರಾಬೆನ್ ಮೋದಿ ಅವರ ಅಂತ್ಯಕ್ರಿಯೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೋದರರೊಂದಿಗೆ ತಾಯಿಯ ಶವವನ್ನು ಹೊತ್ತು ಸಾಗಿದ್ದಾರೆ.
ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ಹೊರಹೊಮ್ಮುತ್ತಿದ್ದಂತೆ, ದೇಶ, ವಿದೇಶಗಳಿಂದ ಸಂತಾಪ ಮತ್ತು ಶ್ರದ್ಧಾಂಜಲಿಗಳು ಹರಿದು ಬರಲಾರಂಭಿಸಿವೆ. ಅಹಮದಾಬಾದ್‌ನಲ್ಲಿ ನಿಧನರಾದ ತಮ್ಮ ತಾಯಿ ಹೀರಾಬೆನ್ ಅವರ ಪಾರ್ಥಿವ ಶರೀರವನ್ನು ನರೇಂದ್ರ ಮೋದಿ ಹೊತ್ತೊಯ್ಯುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ
ಶತಾಯುಷಿ ಮಹಿಳೆ ಹೀರೇಬಾನ್ ರವರು 1923 ಜೂನ್ 18 ರಂದು ಜನಿಸಿದರು.
ಅಂತ್ಯ ಸಂಸ್ಕಾರ ಗಾಂಧಿ ನಗರದಲ್ಲಿ ನಡೆಯಲಿದ್ದು.
ಶತಮಾನದ ದೀಪವೊಂದು ದೇವರ ಪಾದ ಸೇರಿಕೊಂಡಿವೆ ಎಂದು ಪ್ರಧಾನಿ ಮೋದಿ ತನ್ನ ತಾಯಿಯ ಬಗ್ಗೆ ಟ್ವಿಟ್ ಮಾಡಿಕೊಂಡಿದ್ದಾರೆ.
ಇನ್ನು ದೇಶಾದ್ಯಂತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇಡೀ ದೇಶವೇ ಮೋದಿಯ ಸಾಂತಾಪದಲ್ಲಿ ಜತೆಯಾಗುತ್ತಿದೆ ಶತಾಯುಷಿ ಹೀರೇಬಾನ್ ರವರು ನಮಗೆ ಆದರ್ಶ ಎಂದು ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.
ಮೋದಿ ಸಹೋದರರು ಮತ್ತು ಕುಟುಂಬಸ್ಥರು ಹೀರಾಬೆನ್ ಮೋದಿ ಅವರ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡರು. ಪ್ರಧಾನಿ ಮೋದಿ ಅವರು ತಮ್ಮ ತಾಯಿಯ ಅಂತ್ಯಕ್ರಿಯೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿ, ಕೈಮುಗಿದು ಅಂತಿಮ ನಮನ ಸಲ್ಲಿಸಿದರು.