ಪುತ್ತೂರು: ಅರಿಯಡ್ಕ ಗ್ರಾಮದಲ್ಲಿ ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷವೂ ನಡೆಸಿಕೊಂಡು ಬರುವ ಎ.ಎಫ್.ಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನ್‌ಮೆಂಟ್ ಸೀಸನ್-೭ ಈ ವರ್ಷವು ಬಹಳ ವಿಜ್ರಂಭಣೆಯಿಂದ ಎ.ಎಫ್.ಸಿ ಮೈದಾನದಲ್ಲಿ ಜನವರಿ ೧ ರಂದು ನಡೆಯಿತು.

ಪಂದ್ಯಾಕೂಟದ ಸಮಯದಲ್ಲಿ ಹಲವು ಕಾರ್ಯಕ್ರಮಗಳು ಏರ್ಪಡಿಸಿದ್ದು ಬಲಿಷ್ಟ ಆರು ತಂಡಗಳ ನಡುವೆ ಜಿದ್ದಾ ಜಿದ್ದೀನ ಹೋರಾಟದ ಪಂದ್ಯವಾಗಿ ಮಾರ್ಪಾಡುಗೊಂಡಿತ್ತು.

ಸ್ಥಳಿಯ ಯುವಕರನ್ನು ಕಟ್ಟಿಕೊಂಡು ಬಂದ ಈ ಗೆಳೆಯರ ಬಳಗ ಇದೀಗ ಏಳನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇಡೀ ಜಿಲ್ಲೇಯೇ ಇವರತ್ತ ತಿರುಗವಂತೆ ಮಾಡಿದೆ.ಕಾರಣ ಅಷ್ಟೊಂದು ಮನಮೋಹಕವಾಗಿತ್ತು ಇಲ್ಲಿನ ಸಂಘಟಕರ ಕಾರ್ಯವೈಖರಿ ಮತ್ತು ಶಿಸ್ತಿನ ಆಟವು.
AFC ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಅರಿಯಡ್ಕ ಇದರ ಏಳನೇ ಆವೃತ್ತಿಯ ಐಪಿಎಲ್ ಪ್ರೀಮಿಯರ್ ಮಾದರಿಯ APL ಸೀಸನ್-7 ಕ್ರಿಕೆಟ್ ಪಂದ್ಯಾಟವು ಹೊಸ ವರ್ಷದ(೦೧-೦೧-೨೦೨೩) ದಿನದಂದು ನಡೆಯಿತು.

6 ತಂಡಗಳ ಮದ್ಯೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಎ.ಆರ್ ಆಶಿಕ್ ಕುಂಬ್ರ ಮತ್ತು ರಾಝಿಕ್ ಕುಂಬ್ರ ಅವರ ಮಾಲಕತ್ವದ ‘ಮಾಸ್ಟರ್ಸ್ ಕುಂಬ್ರ’ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿತು.ಈ ತಂಡವನ್ನು ಕಪ್ತಾನನಾಗಿ ಪುತ್ತೂರು ತಾಲೂಕಿನ ಬ್ಯಾಟಿಂಗ್ ದಿಗ್ಗಜ ಮುಕ್ತಾರ್ ಕುಂಬ್ರ ಮುನ್ನಡೆಸಿದರೆ ಮ್ಯಾಚಿನ ಉದ್ದಕ್ಕೂ ಸೋಲನ್ನು ಕಾಣದೆ ಫೈನಲ್ ತಲುಪಿದ ಲಕ್ಕಿ ಕ್ಯಾಪ್ಟನ್ ಮನಾಝಿರ್ ಮುನ್ನಡೆಸಿದ ಸುಲ್ತಾನ್ ಅಟ್ಯಾಕರ್ಸ್ ರನ್ನರ್ ಆಪ್ ಆಗಿ ಹೊರಹೊಮ್ಮಿತು.
ವಿಶೇಷವೆಂದರೆ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಮೂರು ಬಾರಿ ಫೈನಲಿಗೆ ಲಗ್ಗೆಯಿಟ್ಟ ಸುಲ್ತಾನ್ ಅಟ್ಯಾಕರ್ಸ್ ಈ ಬಾರಿಯೂ ಚಾಂಪಿಯನ್ ಆಗಲಿದೆ ಎಂದು ಕಾದು ಕುಳಿತಿದ್ದ ಪ್ರೇಕ್ಷಕರನ್ನು ಮೂಕರನ್ನಾಗಿಸಿ ವಿಜಯ ಪತಾಕೆಯನ್ನು ತನ್ನ ಕಡೆಗೆ ವಾಲಿಸಿಕೊಂಡು ಚಾಂಪಿಯನ್ ಪಟ್ಟವನ್ನು ಈ ಬಾರಿ ಮಾಸ್ಟರ್ಸ್ ಕುಂಬ್ರ ಅಲಂಕರಿಸಿಕೊಂಡಿತು.

ಪ್ರತಿ ಪಂದ್ಯವೂ ಎಲ್ಲರನ್ನು ತುದಿಗಾಲಲ್ಲಿ ನಿಲ್ಲಿಸಿದರೆ ಫೈನಲ್ ಅಂತೂ ಬಹಳ ರೊಮಾಂಚನಕಾರಿಯಾಗಿತ್ತು.ಕೊನೆಯ ಬಾಲ್ ತನಕ ವಿಜಯಲಕ್ಷ್ಮಿ ಯಾರಿಗೆ ಎಂಬುವುದನ್ನು ಊಹಿಸಲು ಕೂಡ ಅಸಾಧ್ಯವಾದ ರೀತಿಯಲ್ಲಾಗಿತ್ತು ಫೈನಲ್ ಪಂದ್ಯ ಮುಕ್ತಾಯಗೊಂಡಿದ್ದು ಕೊನೆಗೂ ಎರಡು ಬಾರಿ ಚಾಂಪಿಯನ್ನರಾಗಿದ್ದ ಸುಲ್ತಾನ್ ಅಟ್ಯಾಕರ್ಸ್ ಬಲಿಷ್ಟ ತಂಡವಾದ ಮಾಸ್ಟರ್ ಕುಂಬ್ರರವರ ಮುಂದೆ ಮಂಡಿಯೂರಬೇಕಾಯಿತು.


ಪಂದ್ಯಾಕೂಟದಲ್ಲಿ ಲೀಲಾ ಜಾಲವಾಗಿ ಬ್ಯಾಟ್ ಬೀಸುತ್ತಾ ೧೨ ಬಾಲಿನಲ್ಲಿ ೫೦ ರನ್ನನ್ನು ಸಿಡಿಸಿ ಮೈದಾನದ ಮೂಲೆಮೂಲೆಗೂ ಬಾಲನ್ನು ಅಟ್ಟಾಡಿಸುತ್ತಿದ್ದ ಮುಕ್ತಾರ್ ಕುಂಬ್ರರವರು ಸರಣಿ ಶ್ರೇಷ್ಠ ಪ್ರಶಸ್ತಿ ತನ್ನಾದಾಗಿಸಿಕೊಂಡರೆ ಮೈದಾನದಲ್ಲಿರುವ ಕ್ರಿಕೆಟ್ ಪ್ರೇಮಿಗಳನ್ನು ಮನರಂಜಿಸುತ್ತಾ ಎದುರಿನ ಟೀಂ ಸದಸ್ಯರ ಎದೆಬಡಿತವನ್ನು ಹೆಚ್ಚಿಸಿ ಬಾಲನ್ನು ದಂಡಿಸುತ್ತಿದ್ದ ಸಿಕ್ಸರ್ ವೀರ ಸುಲ್ತಾನ್ ಅಟ್ಯಾಕರ್ಸ್ ತಂಡದ ಐಕಾನ್ ಆಟಗಾರ ಶಿಹಾಬ್ ಎನ್.ಎಫ್.ಸಿ ರವರು ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


ಫೈನಲ್ ಪಂದ್ಯದಲ್ಲಿ ಮಾಸ್ಟರ್ ಕುಂಬ್ರ ೬೦ ರನ್ನುಗಳ ಟಾರ್ಗೆಟ್ ನೀಡಿದ್ದು ಸುಲ್ತಾನ್ ಅಟ್ಯಾಕರ್ಸ್ ಬರೋಬ್ಬರಿ ೫೬ ರ ತನಕ ಚೇಸ್ ಮಾಡಿದ್ದು ಕೊನೆಯ ಬಾಲಲ್ಲಿ ಬೌಂಡರಿ ಬಾರಿಸಿದ್ದರೆ ವಿಜಯ ಸುಲ್ತಾನ್ ಅಟ್ಯಾಕರ್ಸ್ ಪಾಲಾಗುತ್ತಿತ್ತು ಆದರೆ ಶಿಸ್ತು ಬದ್ಧ ಬೌಲಿಂಗ್ ಮುಂದೆ ೧ ರನ್ನು ಗಳಿಸಿ ೪ ರನ್ನುಗಳ ಅಂತರದಲ್ಲಿ ಗೆದ್ದ ಮಾಸ್ಟರ್ ಕುಂಬ್ರ ಫೈನಲಿನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಕೊಂಡಿಸಿದ್ದಾರೆ. ಫೈನಲ್ ಪಂದ್ಯದ ರೋಮಾಂಚನಕಾರಿ ವೀಡಿಯೋ ನೋಡಿ 👇
https://youtu.be/mApzEYg9Vp0





